ಧರ್ಮಸ್ಥಳದಲ್ಲಿ “ಈಶ್ವರಾರ್ಪಣ” ಬಿಡುಗಡೆ

 ಧರ್ಮಸ್ಥಳದಲ್ಲಿ “ಈಶ್ವರಾರ್ಪಣ” ಬಿಡುಗಡೆ
Share this post
ಡಿ ವೀರೇಂದ್ರ ಹೆಗ್ಗಡೆಯವರಿಂದ “ಈಶ್ವರಾರ್ಪಣ” ಬಿಡುಗಡೆ.

ಬೆಳ್ತಂಗಡಿ, ಜನವರಿ 18, 2021: ಉಡುಪಿಯ ಎಂ. ಜಿ. ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಅರವಿಂದ ಹೆಬ್ಬಾರ್ ಸಂಪಾದಕತ್ವದಲ್ಲಿ ಪ್ರಕಟಿಸಿದ “ಈಶ್ವರಾರ್ಪಣ” ಗ್ರಂಥವನ್ನು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

“ಈಶ್ವರಾರ್ಪಣ” ಪುಸ್ತಕವು ಖ್ಯಾತ ಪತ್ರಕರ್ತ ಬರಹಗಾರ, ಛಾಯಾಚಿತ್ರಗಾರ ಹಾಗೂ ವಿಮರ್ಶಕ ಈಶ್ವರಯ್ಯ ಅವರ ವಿಮರ್ಶಾ ಲೇಖನಗಳ ಸಂಗ್ರಹ.

ಪುಸ್ತಕ ಬಿಡುಗಡೆಗೊಳಿಸಿ ಶುಭಹಾರೈಸಿದ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಕೆಮರಾಗಳ ವ್ಯವಸ್ಥಿತ ಜೋಡಣೆ ಬಗ್ಗೆ  ಈಶ್ವರಯ್ಯ ನೀಡಿದ ಸಹಕಾರವನ್ನು ಹೆಗ್ಗಡೆಯವರು  ಸ್ಮರಿಸಿದರು. ಪುಸ್ತಕದ ಸಂಪಾದಕರಾದ ಪ್ರೊ. ಅರವಿಂದ ಹೆಬ್ಬಾರ್, ವಸಂತಾಲಕ್ಷ್ಮೀ ಹೆಬ್ಬಾರ್ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ನಿತ್ಯಾನಂದ ರಾವ್ ಹಾಗೂ ಇತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!