‘ಬಿಹಾರ ಮಾದರಿಯ ಮನಸ್ಥಿತಿ ನಮ್ಮ ಜನಪ್ರತಿನಿಧಿಗಳಿಗೆ ಬಾರದಿರಲಿ’

 ‘ಬಿಹಾರ ಮಾದರಿಯ ಮನಸ್ಥಿತಿ ನಮ್ಮ ಜನಪ್ರತಿನಿಧಿಗಳಿಗೆ ಬಾರದಿರಲಿ’
Share this post

ಉತ್ತರ ಕನ್ನಡ ಜಿಲ್ಲೆಗೆ ಪ್ರಜ್ಞಾವಂತ ಜನತೆ ಮತ್ತು ಜನಪ್ರತಿನಿಧಿಗಳ ಜಿಲ್ಲೆ ಎಂಬ ಕೀರ್ತಿ ಇದೆ. ಇಲ್ಲಿನ ಜನಪ್ರತಿನಿಧಿಗಳು ಈವರೆಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಘನತೆ, ಗೌರವ ಇಟ್ಟುಕೊಂಡವರು ಎಂಬ ಸಮಾಧಾನ ಪ್ರತಿಯೊಬ್ಬ ನಾಗರಿಕರಲ್ಲಿದೆ.

ಆದರೆ ಇತ್ತೀಚಿನ ಘಟನೆಯೊಂದು ಬಹಳ ಬೇಸರ ತರಿಸುವಂತೆ ನಡೆದಿದೆ. ಕಳೆದ ಮೂರ್ನಾಲ್ಕು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿರುವುದನ್ನು ಗಮನಿಸಿದೆ. ಗೌರವಯುತ ಸ್ಥಾನದಲ್ಲಿರುವ ಜನಪ್ರತಿನಿಧಿಯೊಬ್ಬರು ಓರ್ವ ಅಧಿಕಾರಿ ತನ್ನ ಅಪ್ಪಣೆ ಇಲ್ಲದೆ ತಾನು ಆಳುವ ಕ್ಷೇತ್ರಕ್ಕೆ ಕಾಲಿಟ್ಟಿದ್ದೇಕೆ ಎಂದು ಹಿರಿಯ ಅಧಿಕಾರೋರ್ವರ ಎದುರು ಪ್ರಶ್ನಿಸಿದ್ದಾರೆ. ಇದನ್ನು ಗಮನಿಸಿದಾಗ ನನಗೆ ಅನಿಸಿದ್ದು ಉತ್ತರ ಕನ್ನಡದಲ್ಲೂ ‘ಬಿಹಾರ ಮಾದರಿಯ ರಾಜಕಾರಣ ಆರಂಭವಾಯಿತೇ?’ ಎಂದು.

ಬಿಹಾರದಲ್ಲಿ ಅಧಿಕಾರಿಗಳು, ಜನಸಾಮಾನ್ಯರ ಮೇಲೆ ಜನಪ್ರತಿನಿಧಿಗಳು ಅಧಿಕಾರ ದರ್ಪದಿಂದ ದಬ್ಬಾಳಿಕೆ ನಡೆಸುವುದನ್ನು ಕೇಳಿದ್ದೇವೆ. ಆದರೆ ಈಗ ಜಿಲ್ಲೆಯಲ್ಲೂ ಅಂತಹ ಪರಿಸ್ಥಿತಿ ಬಂದೊದಗಿತೆ ಎಂಬ ಪ್ರಶ್ನೆಯನ್ನು ನಮ್ಮೊಳಗೆ ಕೇಳಿಕೊಳ್ಳುವ ದುಸ್ಥಿತಿ ಬಂದಿದೆ.

ಅಧಿಕಾರಿಗಳು ಭ್ರಷ್ಟರಾದರೆ, ಜನರಿಗೆ ಸ್ಪಂದಿಸದೆ ಇದ್ದರೆ ಅಥವಾ ನಿರಂತರವಾಗಿ ದುರ್ನಡತೆ ತೋರುತ್ತಿದ್ದರೆ ಅವರನ್ನು ಸರ್ಕಾರದ ನಿಯಮದಡಿ ಶಿಕ್ಷಿಸುವ ನಿಯಮವಿದೆ. ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತಂದು ಅವರನ್ನು ವರ್ಗಾಯಿಸಲೂಬಹುದು. ಆದರೆ ದುರಂತವೆಂದರೆ ಜನಪ್ರತಿನಿಧಿಯೋರ್ವರು ಅಧಿಕಾರಿ ತನ್ನ ಅಪ್ಪಣೆ ಇಲ್ಲದೆ ತನ್ನ ಕ್ಷೇತ್ರಕ್ಕೆ ಕಾಲಿಡಲೂಬಾರದು ಎಂದರೆ ಅದು ಆಡಳಿತ ವ್ಯವಸ್ಥೆಯ ಉದ್ಧಟತನ ಎನ್ನದೆ ಬೇರೆ ವಿಧಿಯಿಲ್ಲ. ಅಧಿಕಾರಿಗೆ ನನ್ನ ಕ್ಷೇತ್ರಕ್ಕೆ ಕಾಲಿಡಲು ಎಷ್ಟು ಧೈರ್ಯ ಎಂಬ ಮಾತನ್ನೂ ಜನಪ್ರತಿನಿಧಿ ಆಡಿರುವದು ವಿಡಿಯೋದಲ್ಲಿದೆ. ಓರ್ವ ಅಧಿಕಾರಿ ಆ ಜನಪ್ರತಿನಿಧಿಯ ಕ್ಷೇತ್ರದಲ್ಲಿ ಕೆಲಸ ಮಾಡಲು ಆಡಳಿತ ಅನುಭವ ಮುಖ್ಯವೇ ಅಥವಾ ಧೈರ್ಯ ಪ್ರಮುಖವೆ ಎಂಬ ಪ್ರಶ್ನೆ ಮೂಡುತ್ತದೆ. ಇದೂ ಅಲ್ಲದೆ ಅದು ಜನಪ್ರತಿನಿಧಿ ಪರೋಕ್ಷವಾಗಿ ಅಧಿಕಾರಿ, ಸಿಬ್ಬಂದಿಗಳನ್ನು ಬೆದರಿಸಿದಂತೆಯೂ ಭಾಸವಾಗುತ್ತದೆ.

‘ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ’ ಎಂಬ ಗಾದೆ ಮಾತೊಂದಿದೆ. ಅಲ್ಲದೆ ‘ಅಕ್ಕಿ ರಾಶಿ ಮೇಲೆ ಕೋಳಿಗೆ ತಂದಿಟ್ರೆ ಕೋಳಿ ಕೆದರಿ ತಿನ್ನೋದು ಬಿಡುತ್ತಾ’ ಎಂಬ ನಾಣ್ಣುಡಿ ಇದೆ. ಇವೆಲ್ಲ ಜನಪ್ರತಿನಿಧಿಯ ವರ್ತನೆ ಕಂಡಾಗ ಅವ್ಯಕ್ತವಾಗುವಂತೆ ಭಾಸವಾಯಿತು.

Also read: Armed Dacoits injure woman, rob gold and cash in Kadaba

ಮಾಧವ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

ಓರ್ವ ಜನಪ್ರತಿನಿಧಿಗೆ ಐದು ವರ್ಷದ ಅಧಿಕಾರ ಸಿಗಬಹುದು. ಅವರು ಒಳ್ಳೆಯ ಕೆಲಸ ಮಾಡಿದರೆ ಮತ್ತಷ್ಟು ವರ್ಷ ಅಧಿಕಾರ ಮುಂದುವರೆಯಲೂಬಹುದು. ಆದರೆ ಸರ್ಕಾರಿ ನೌಕರರಿಗೆ ಹಾಗಲ್ಲ, ಅವರಿಗೆ ಅರವತ್ತು ವರ್ಷದವರೆಗೂ ಕೆಲಸ ಖಾಯಂ. ಒಂದು ವೇಳೆ ವ್ಯವಸ್ಥೆಯ ಮೇಲೆ ಅವರಿಗೆ ಬೇಸರ ಹುಟ್ಟಿದರೆ ಅವರೇ ಜನಪ್ರತಿನಿಧಿಯೂ ಆಗಲು ಅವಕಾಶವಿದೆ. ಇದಕ್ಕೆ ಈಗಿನ ಕೃಷಿ ಸಚಿವ ಬಿ.ಸಿ.ಪಾಟೀಲ್, ಕುಡಚಿ ಶಾಸಕ ಪಿ.ರಾಜೀವ್ ಅಂತಹವರು ಉದಾಹರಣೆ. ಆದರೆ ಜನಪ್ರತಿನಿಧಿಗೆ ಮಾತ್ರ ಅಧಿಕಾರ ಬಿಟ್ಟು ನೌಕರಿ ಮಾಡುವ ಯೋಗ ಇಲ್ಲ. ಅಲ್ಲವೇ?

Also read:

Subscribe to our newsletter!

Other related posts

error: Content is protected !!