ರೈಲ್ವೆ ವೇಳಾಪಟ್ಟಿ ಬದಲಿಸಿದರೆ ರೈಲ್ ರೋಕೋ
ಕಾರವಾರ ರೈಲ್ವೆ ಬಳಕೆದಾರರ ಹಿತರಕ್ಷಣಾ ಸಮಿತಿ ಎಚ್ಚರಿಕೆ
ಕಾರವಾರ, ಡಿಸೆಂಬರ್ 17, 2020 : ಕಾರವಾರ-ಪಡೀಲ್-ಬೆಂಗಳೂರು ರೈಲಿನ ವೇಳಾಪಟ್ಟಿ ಬದಲಿಸಿದರೆ ರೈಲು ತಡೆ (ರೈಲ್ ರೋಕೋ) ನಡೆಸಿ ಪ್ರತಿಭಟಿಸುವುದಾಗಿ ಕಾರವಾರ ರೈಲ್ವೆ ಬಳಕೆದಾರರ ಹಿತರಕ್ಷಣಾ ಸಮಿತಿ ಎಚ್ಚರಿಸಿದೆ.
“ಈಗಿರುವ ವೇಳೆಯಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದ ಜನರಿಗೆ ಅನುಕೂಲವಾಗಿದೆ. ಯಾವುದೇ ಸಕಾರಣವಿಲ್ಲದೆ ಏಕಾಏಕಿ ರೈಲ್ವೆ ಪ್ರಯಾಣದ ವೇಳೆ ಬದಲಿಸಿದರೆ ಜನರಿಗೆ ಅನಾನುಕೂಲವೇ ಹೊರತು, ಉಪಯೋಗವಾಗದು,” ಎಂದು ಸಮಿತಿ ಅಧ್ಯಕ್ಷ ಜಗದೀಶ ಬಿರ್ಕೋಡಿಕರ್ ಹಾಗೂ ಕಾರ್ಯಾಧ್ಯಕ್ಷ ಮಾಧವ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ವೇಳಾಪಟ್ಟಿ ಬದಲಿಸಿದಂತೆ ರೈಲ್ವೆ ಇಲಾಖೆಗೆ ಮನವಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ವೇಳೆ ಬದಲಾಯಿಸಿದರೆ ರೈಲು ತಡೆ (ರೈಲ್ ರೋಕೋ) ನಡೆಸಿ ಪ್ರತಿಭಟನೆ ನಡೆಸುತ್ತೇವೆ. ರೇಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮೀತಿ. ಕುಂದಾಪುರ ಕೊಟ್ಟ ಪ್ರತಿಭಟನಾ ಕರೆಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲ ನೀಡಲು ಸಿದ್ಧರಿದ್ದೇವೆ,” ಎಂದು ತಿಳಿಸಿದ್ದಾರೆ.
- Daily Panchangam
- Sri Dharmasthala Mela Yakshagana show today
- Kateel Mela Yakshagana details
- Udupi Sri Krishna Alankara
- Udupi Mallige and Jaaji today’s price