ಚಂಪಾಷಷ್ಠಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 17 ರಿಂದ ಭಕ್ತಾಧಿಗಳ ಪ್ರವೇಶ ನಿಷೇಧ

 ಚಂಪಾಷಷ್ಠಿ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 17 ರಿಂದ ಭಕ್ತಾಧಿಗಳ ಪ್ರವೇಶ ನಿಷೇಧ
Share this post


ಮಂಗಳೂರು, ಡಿಸೆಂಬರ್ 14, 2020: ದ.ಕ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಥಿ ಮಹೋತ್ಸವವು ನಡೆಯಲಿದ್ದು ಕೋವಿಡ್-19 ಮುಂಜಾಗೃತಾ ಕ್ರಮವಾಗಿ ಡಿ. 17 ರಿಂದ 20 ರವರೆಗೆ ಭಕ್ತಾಧಿಗಳ ಪ್ರವೇಶ ನಿಷೇಧಿಸಲಾಗಿದೆ.

ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ರಥೋತ್ಸವ ಸೇವೆಗಳಿಗೆ ಮುಂಗಡ ನೊಂದಾಯಿಸಿಕೊಂಡಿರುವ ಭಕ್ತಾಧಿಗಳನ್ನು ಹೊರತುಪಡಿಸಿ ಮಹೋತ್ಸವದ  ಚೌತಿ, ಪಂಚಮಿ ಹಾಗೂ ಷಷ್ಠಿ ರಥೋತ್ಸವಗಳನ್ನು ಒಳಗೊಂಡಂತೆ ದೇವಳಕ್ಕೆ ಹಾಗೂ ರಥಬೀದಿಗೆ ಡಿಸೆಂಬರ್ 17 ರಿಂದ 20 ರವರೆಗೆ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಿಕರು ಹಾಗೂ ಭಕ್ತಾಧಿಗಳ ಆಗಮನವನ್ನು ನಿಷೇಧಿಸಲಾಗಿದೆ.

ಮೇಲ್ಕಂಡ ಆದೇಶವನ್ನು ಪಾಲಿಸದೆ ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಅಂತವರ ವಿರುದ್ದ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 2020 ಕಲಂ 5(3), 6(1), (2) ರನ್ವಯ ಕಾನೂನು ರೀತ್ಯಾ ಕ್ರಮ ಜರಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾದಿಕಾರದ ಅಧ್ಯಕ್ಷರಾದ ಡಾ. ರಾಜೇಂದ್ರ ಕೆ.ವಿ ರವರು ಆದೇಶ ಹೊರಡಿಸಿದ್ದಾರೆ.  

Subscribe to our newsletter!

Other related posts

error: Content is protected !!