ಗ್ರಾ ಪಂ ಚುನಾವಣೆಗೂ ಕೋವಿಡ್-19 ಎಸ್‌ಓಪಿ ಕಡ್ಡಾಯ
2ನೇ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಧೀಸೂಚನೆ ಪ್ರಕಟ
ಕಾರವಾರ ಡಿಸೆಂಬರ್ 11, 2020: ಗ್ರಾಮ ಪಂಚಾಯತಿಗಳ 2ನೇ ಹಂತದ ಸಾರ್ವತ್ರಿಕ ಚುನಾವಣೆಯ ಅಧೀಸೂಚನೆ ಪ್ರಕಟಿಸಲಾಗಿದ್ದು, ಡಿಸೆಂಬರ್ 11 ಶುಕ್ರವಾರದಿಂದಲೇ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಜಿಲ್ಲಧಿಕಾರಿ ಡಾ. ಹರಿಶ್‌ಕುಮಾರ್ ಕೆ. ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ೨ನೇ ಹಂತದ ಅಧಿಸೂಚನೆಯ ಕುರಿತು ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಈ 2ನೇ ಹಂತದಲ್ಲಿ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ 126 ಗ್ರಾಮ ಪಂಚಾಯತಿಗಳಿಗೆ ಒಟ್ಟು 665 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಹೇಳಿದರು.
2 ನೇ ಹಂತದ ಚುನಾವಣೆಗಾಗಿ ಡಿ. 11 ಶುಕ್ರವಾರದಂದು ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಡಿ. 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿ. 17 ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದರೆ ಡಿ. 19 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಡಿ. 27 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಘಂಟೆಯವರಗೆ ಮತದಾನ ನಡೆಯಲಿದ್ದು ಡಿ. 30 ರಂದು ಆಯಾ ತಾಲೂಕ ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದು ಎಂದರು.
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆಗೂ ಸಹ ಎಸ್‌ಓಪಿ ಹೋರಡಿಸಿ ಮಾರ್ಗಸೂಚಿ ಅನುಸರಿಸಲು ಕಡ್ಡಾಯಗೊಳಿಸಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಕೇವಲ ಐದು ಜನ ಬೆಂಬಲಿಗರೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಚುನಾವಣೆಯ ಪ್ರಚಾರ ಕೈಗೊಳ್ಳಬೇಕು. ಕೋವಿಡ್-೧೯ ಸೊಂಕಿತ ಮತದಾರರು ಸಹ ಪಿಪಿಇ ಕಿಟ್ ದರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಸದಚಾರ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ. ಅಲ್ಲದೇ ಯಾವುದೇ ಅಭ್ಯರ್ಥಿಯು ಸಮಾಜ ಅಥವಾ ಸಾಮಾಜಿಕ ಜಾಲತಣಗಳಲ್ಲಿ ವಿವಿಧ ಜಾತಿ ಮತ್ತು ಸಮುದಾಯಗಳ ಮಧ್ಯೆ ಅಥವಾ ಮತೀಯ ಸಮೂಹಳ ಮಧ್ಯೆ ವೈಮನಸತ್ವವನ್ನು ಕೆರಳಿಸುವ ಅಥವಾ ಪರಸ್ಪರ ದ್ವೇಷ ಹುಟ್ಟಿಸುವ ಯವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ಜೊತೆಗೆ ಬೇರೆ ಅಭ್ಯರ್ಥಿಯ ಖಾಸಗಿ ನಡತೆ ಅಥವಾ ಶೀಲಗಳ ಬಗ್ಗೆ ಸುದ್ದಿಯನ್ನು ಪ್ರಚಾರ ಮಾಡತಕ್ಕದ್ದಲ್ಲ ಎಂದರು.
ಅಭ್ಯರ್ಥಿಗಳು ಮತಗಟ್ಟೆಯಿಂದ ೧೦೦ ಮೀಟರ್‌ಗಳ ಅಂತರ ಪ್ರದೇಶದ ಒಳಗೆ ಮತಕ್ಕಾಗಿ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿ ಪರವಾಗಿ ಮತಗಟ್ಟೆಗಳಿಗೆ ಮತದಾರರನ್ನು ವಾಹನದಲ್ಲಿ ಕರೆತರುವುದು ಹಾಗೂ ಅಲ್ಲಿಂದ ವಾಪಸ್ಸು ಕರೆದುಕೊಂಡು ಹೊಗುವಂತಿಲ್ಲ. ಮತಗಳಿಕೆಗಾಗಿ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಪರವಾಗಿ ಯವುದೇ ನಿಕಾಯ ಅಥವಾ ವ್ಯಕ್ತಿಗಳು ಧಾರ್ಮಿಕ ಚಿಹ್ನೆಗಳು ಮತ್ತು ಧಾರ್ಮಿಕ ವ್ಯಕ್ತಿಗಳನ್ನು ಬಳಸಿಕೊಳ್ಳವಂತಿಲ್ಲ. ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿ ಇರುವದಿಲ್ಲ ಆದರೆ ಈ ಕುರಿತು ಲೆಕ್ಕವನ್ನು ನೀಡಬೇಕಾಗಿರುತ್ತದೆ ಎಂದರು.