ಆಹಾರದ ಹಕ್ಕಿಗಾಗಿ, ಸುಸಜ್ಜಿತ ವಧಾಗ್ರಹದ ನಿರ್ಮಾಣಕ್ಕಾಗಿ ಒತ್ತಾಯಿಸಿ ಪೋಲಿಸ್ ಆಯುಕ್ತರಿಗೆ ಮನವಿ

 ಆಹಾರದ ಹಕ್ಕಿಗಾಗಿ, ಸುಸಜ್ಜಿತ ವಧಾಗ್ರಹದ ನಿರ್ಮಾಣಕ್ಕಾಗಿ ಒತ್ತಾಯಿಸಿ ಪೋಲಿಸ್ ಆಯುಕ್ತರಿಗೆ ಮನವಿ
Share this post

ಮಂಗಳೂರು, ನ 16: ಜನತೆಯ ಆಹಾರದ ಹಕ್ಕಿನ ಸಂರಕ್ಷಣೆಗಾಗಿ, ಸುಸಜ್ಜಿತ ಜಾನುವಾರು ವಧಾಗ್ರಹದ ನಿರ್ಮಾಣ ಒತ್ತಾಯಿಸಿ ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿ ನೇತ್ರತ್ವದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಅಕ್ರಮ ಗೋಸಾಗಾಟದ ನೆಪದಲ್ಲಿ ಅಧಿಕ್ರತ ದಾಖಲೆಗಳನ್ನು ಹೊಂದಿದ್ದರೂ, ವಿನಾಕಾರಣ ಹಲ್ಲೆ ನಡೆಸುವುದು,ಹಣ ಮೊಬೈಲ್ ದರೋಡೆ ಮಾಡುವ ಘಟನೆಗಳು ಇಂದಿಗೂ ಅವ್ಯಾಹತವಾಗಿ ನಡೆಯುತ್ತಿದ್ದು, ಈ ಬಗ್ಗೆ ವ್ಯವಸ್ಥಿತವಾದ ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಕಾನೂನುಬದ್ದವಾಗಿ ವ್ಯಾಪಾರ ನಡೆಸುವವರಿಗೂ ಭಾರೀ ತೊಂದರೆ ಎದುರಾಗಿದೆ,” ಎಂದು ಸಮಿತಿಯ ಸದಸ್ಯರು ಆಯುಕ್ತರಿಗೆ ತಿಳಿಸಿದರು.

ಈ ನಿಟ್ಟಿನಲ್ಲಿ ಕಾನೂನು ಬದ್ದ ವ್ಯಾಪಾರಕ್ಕೆ ಸರಿಯಾದ ಮಾರ್ಗಸೂಚಿಗಳನ್ನು ಅಳವಡಿಸುವ ಮೂಲಕ ವ್ಯಾಪಾರಸ್ಥರಿಗೆ ಸಹಕಾರ ನೀಡಬೇಕೆಂದು ಆಗ್ರಹಿಸಿದಾಗ, ಆಯುಕ್ತರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ವಹಿಸುವ ಬಗ್ಗೆ ಭರವಸೆ ನೀಡಿದರು ಎಂದು ಸಮಿತಿ ನಾಯಕರು ತಿಳಿಸಿದರು.

ನಿಯೋಗದಲ್ಲಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಸುನಿಲ್ ಕುಮಾರ್ ಬಜಾಲ್, ಮಾಜಿ ಮೇಯರ್ ಕೆ.ಅಶ್ರಫ್, ಮಾಜಿ ಕಾರ್ಪೋರೇಟರ್ ಅಬೂಬಕ್ಕರ್, ಮಾನವ ಹಕ್ಕು ಹೋರಾಟಗಾರರಾದ ಕಬೀರ್ ಉಳ್ಳಾಲ, ವ್ಯಾಪಾರಸ್ಥರ ಸಂಘದ ಮುಖಂಡರಾದ ಆಲಿ ಹಸನ್, ಯಾಸಿನ್ ಕುದ್ರೋಳಿ, ಅಬ್ದುಲ್ ಖಾದರ್, ಮುಸ್ತಾಕ್ ಕದ್ರಿಯವರು ಉಪಸ್ಥಿತರಿದ್ದರು .

Subscribe to our newsletter!

Other related posts

error: Content is protected !!