ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಆಚರಣೆ

 ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಆಚರಣೆ
Share this post

ಉಡುಪಿ, ನ 14: ಶ್ರೀ ಕೃಷ್ಣ ಮಠದ ಕನಕ ಗೋಪುರದ ಎದುರುಗಡೆ, ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು “ಬಲೀಂದ್ರ ಪೂಜೆ”ಯನ್ನು ನಡೆಸಿದರು.

ಉಡುಪಿ, ನ 14: ಪಂಚ ದೀಪ ಪ್ರಜ್ವಲನೆ ಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣ ಮಠದ ಎಲ್ಲಾ ಭಾಗಗಳಿಗೂ ಮತ್ತು ಪರ್ಯಾಯ ಅದಮಾರು ಮಠಕ್ಕೂ ದೀಪವನ್ನು ಪ್ರದರ್ಶಿಸಿ ನಂತರ ಒಳ ಕೊಟ್ಟಾರದಲ್ಲಿ ದೀಪಗಳನ್ನು ಇಡಲಾಯಿತು.

ಉಡುಪಿ, ನ 14: ಶ್ರೀ ಕೃಷ್ಣ ಮಠದಲ್ಲಿ, ದೀಪಾವಳಿಯ ಪ್ರಯುಕ್ತ ತೈಲಾಭ್ಯಂಗ ಹಾಗೂ ಎಣ್ಣೆಶಾಸ್ತ್ರ ನಡೆಯಿತು. ಪ್ರಾತಃ ಕಾಲದ 5.21 ಗಂಟೆಗೆ ಚಂದ್ರಶಾಲೆಯಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಮಠದ ದಿವಾನರಾದ ಲಕ್ಷ್ಮೀನಾರಯಣ ಮುಚ್ಚಿಂತಾಯರು ಎಣ್ಣೆಶಾಸ್ತ್ರ ಮಾಡಿದರು .

ನಂತರ ಕೃಷ್ಣಾಪುರ ಮಠಾಧೀಶರು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ, ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರಿಗೆ,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರಿಗೆ,,ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ಎಣ್ಣೆಶಾಸ್ತ್ರ ಮಾಡಿದರು.

ಪರ್ಯಾಯ ಮಠದ ದಿವಾನರು ಶ್ರೀಪಾದರುಗಳಿಗೆ ಮಾಲಿಕೆ ಮಂಗಳಾರತಿ ಮಾಡುವುದರೊಂದಿಗೆ ಹೊಸವಸ್ತ್ರ ಸಮರ್ಪಿಸಿದರು.

Subscribe to our newsletter!

Other related posts

error: Content is protected !!