ಉಪಯೋಗಕ್ಕೆ ಯೋಗ್ಯವಲ್ಲದ ಆಹಾರ ಸಾಮಗ್ರಿಗಳನ್ನು ಕೂಡಲೇ ವಿಲೇಗೊಳಿಸಿ: ಮಾಧವ ನಾಯಕ
ಕಾರವಾರ, ನ ೦7: ಅಂಕಿತ ಅಧಿಕಾರಿಗಳ ಕಚೇರಿಯಲ್ಲಿ ಇರುವ ಎಣ್ಣೆ, ತೊಗರಿಬೇಳೆ, ಇನ್ನಿತರ ಬಳಕೆಗೆ ಯೋಗ್ಯವಲ್ಲ ಎಂದು ತೀರ್ಮಾನವಾಗಿರುವ ವಸ್ತುಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಸ್ಥಳಾಂತರಿಸಿ ಕೂಡಲೇ ವಿಲೇಗೊಳಿಸಲು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಕಾರವಾರ ತಹಶೀಲ್ದಾರ್ ಅವರನ್ನು ವಿನಂತಿಸಿದ್ದಾರೆ.
“ಈ ಹಿಂದೆ ನೆರೆ ಬಂದ ಸಂದರ್ಭದಲ್ಲಿ ಮಾನ್ಯ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ ರವರು ನೆರೆ ಪೀಡಿತ ಪ್ರದೇಶದಲ್ಲಿ ನೆರೆ ಪೀಡಿತರಿಗೆ ಆಹಾರ ಸಾಮಗ್ರಿಗಳನ್ನು ನೀಡಿದ್ದರು.ಆದರೆ ಅವರು ನೀಡಿದ ಕೆಲವು ಸಾಮಗ್ರಿಗಳು ಅವಧಿ ಮುಗಿದ ಮತ್ತು ತಿನ್ನಲು ಯೋಗ್ಯವಲ್ಲ ಎಂದು ಮಾಜಿ ಶಾಸಕರೊಬ್ಬರು ಆಕ್ಷೇಪ ವ್ಯಕ್ತಿಪಡಿಸಿದ ಹಿನ್ನೆಲೆಯಲ್ಲಿ ಆಹಾರ ಗುಣಮಟ್ಟದ ಅಧಿಕಾರಿಗಳು ಎಣ್ಣೆ ಮತ್ತು ತೋಗರಿಬೆಳೆ ಪರೀಕ್ಷೆಗೆ ಒಳಪಡಿಸಿ ಅದು ತಿನ್ನಲು ಯೋಗ್ಯವಲ್ಲ ಎಂದು ತಮಗೆ ವರದಿ ನೀಡಿರುವರೆಂದು ಅಂಕಿತ ಅಧಿಕಾರಿಗಳು ತಿಳಿಸಿರುತ್ತಾರೆ,” ಎಂದು ಹೇಳಿದರು.
“ಸದ್ರಿ ಎಣ್ಣೆ ಮತ್ತು ತೊಗರಿಬೇಳೆ, ಮತ್ತು ಇತರೆ ವಸ್ತುಗಳು ಅಂಕಿತ ಅಧಿಕಾರಿಗಳ ಕಚೇರಿಯಲ್ಲಿ ಇರುವದರಿಂದ ಇಲಿ, ಹೆಗ್ಗಣ ಗಳು ಎಣ್ಣೆ ಮತ್ತು ತೊಗರಿಬೇಳೆ ಪ್ಯಾಕೆಟ್ ಗಳನ್ನು ಒಡೆದಿರುವದರಿಂದ ಗೊಬ್ಬು ನಾರುತ್ತಿದೆ.ಆದ್ದರಿಂದ ಸದ್ರಿ ನಿರುಪಯುಕ್ತ ವಸ್ತುಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಬೇಕು,” ಎಂದು ವಿನಂತಿಸಿದ್ದಾರೆ.