ಧರ್ಮಸ್ಥಳ ಹಿಂದೂ ರುದ್ರಭೂಮಿಗೆ ವೀರೇಂದ್ರ ಹೆಗ್ಗಡೆಯವರಿಂದ 2.50 ಲಕ್ಷ ಅನುದಾನ ಮಂಜೂರು

 ಧರ್ಮಸ್ಥಳ ಹಿಂದೂ ರುದ್ರಭೂಮಿಗೆ ವೀರೇಂದ್ರ ಹೆಗ್ಗಡೆಯವರಿಂದ 2.50 ಲಕ್ಷ ಅನುದಾನ ಮಂಜೂರು
Share this post

ಬೆಳ್ತಂಗಡಿ, ನ 05: ಧರ್ಮಸ್ಥಳದ ಹಿಂದೂ ರುದ್ರಭೂಮಿಯ ಸಮಿತಿ ಸದಸ್ಯರ ಆಶಯದಂತೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸುಮಾರು 6.00ಲಕ್ಷ ವೆಚ್ಚದಲ್ಲಿ ನವೀಕರಣ ಕಾರ್ಯವು ನಡೆಯುತ್ತಿದೆ. ಈ ನವೀಕರಣ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪೂರಕ ಅನುದಾನವಾಗಿ ರೂ.2,50,000 ಮಂಜೂರಾತಿ ನೀಡಿದ್ದಾರೆ.

ಧರ್ಮಸ್ಥಳ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಡಿ. ಹರ್ಷೇಂದ್ರ ಕುಮಾರ್‍ರವರ ಸಲಹೆ ಸೂಚನೆಯಂತೆ ನವೀಕರಣದ ಅಂಗವಾಗಿ ನೂತನ ಸಿಲಿಕಾನ್ ಬಾಕ್ಸ್ ಅಳವಡಿಕೆ, ಶವಕಟ್ಟೆ, ವಿಶ್ರಾಂತಿ ಕೊಠಡಿ, ಮುಖ್ಯ ಕಚೇರಿಗೆ ಟೈಲ್ಸ್ ಅಳವಡಿಕೆ, ನೂತನ ನೀರಿನ ಟ್ಯಾಂಕ್, ನಳ್ಳಿ ವ್ಯವಸ್ಥೆ, ವಿದ್ಯುತ್ತೀಕರಣ, ಕುಳಿತುಕೊಳ್ಳಲು ಸಿಮೆಂಟ್ ಬೆಂಚ್‍ಗಳು ಮುಂತಾದುವುಗಳ ಕಾಮಗಾರಿಗಳು ನಡೆಯುತ್ತಿವೆ.

ಪೂರಕ ಅನುದಾನದ ಮಂಜೂರಾತಿ ಪತ್ರವನ್ನು ಗ್ರಾಮೀಣಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀಹರಿ , ಇಂಜಿನಿಯರ್ ವಿಶ್ವಜಿತ್‍ರವರು ಧರ್ಮಸ್ಥಳದ ಗ್ರಾಮ ಪಂಚಾಯತ್‍ನ ಆಡಳಿತಧಿಕಾರಿಗಳಾದ ಜಯಕೀರ್ತಿ ಜೈನ್, ಪಿ.ಡಿ.ಒ. ಉಮೇಶ್ ಹಿಂದೂ ರುದ್ರಭೂಮಿಯ ಅಧ್ಯಕ್ಷರಾದ ಶಂಕರ್ ಕುಲಾಲ್, ಕಾರ್ಯದರ್ಶಿ ಪ್ರೀತಮ್, ಕೋಶಾಧಿಕಾರಿ ಡಿ. ಧರ್ಣಪ್ಪರವರಿಗೆ ಹಸ್ತಾಂತರಿಸಿ ನವೀಕರಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ರುದ್ರಭೂಮಿಗೆ ಶ್ರೀ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2 ಸೋಲಾರ್ ಲೈಟ್‍ಗಳನ್ನು ಕೊಡುಗೆಯಾಗಿ ನೀಡಿದ್ದು ಧರ್ಮಸ್ಥಳ ಗ್ರಾಮ ಪಂಚಾಯತ್ ಸಂಪೂರ್ಣ ಸಹಕಾರದೊಂದಿಗೆ ನವೀಕರಣ ಕಾರ್ಯವು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿದೆ.

Subscribe to our newsletter!

Other related posts

error: Content is protected !!