ಸರಳವಾಗಿ ಸಂಪನ್ನಗೊಂಡ ಮಹರ್ಷಿ ವಾಲ್ಮೀಕಿ, ಸರ್ದಾರ್ ವಲ್ಲಬಾಯ್ ಪಟೇಲ್ ಜಯಂತಿ
ಕಾರವಾರ ಅ 30: ಮಹರ್ಷಿ ವಾಲ್ಮೀಕಿ ಹಾಗೂ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಜಯಂತಿಯನ್ನು ಸರಳವಾದ ಸಮಾರಂಭದಲ್ಲಿ ಆಚರಿಸಲಾಯಿತು.
ಪ್ರಸ್ತುತ ಜಿಲ್ಲೆಯಲ್ಲಿ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆಯು ನವೆಂಬರ್ 5ರವರೆಗೆ ಜಾರಿಯಲ್ಲಿರುವದರಿಂದ ಮತ್ತು ಕೊರೋನಾ ವೈರಸ್ (ಕೋವಿಡ್-19) ಹರಡುವಿಕೆ ಹಿನ್ನೆಲೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಅದೇ ರೀತಿ ರಾಷ್ಟ್ರೀಯ ಏಕತೆಯ ಪ್ರತಿಜಾವಿಧಿ ಸ್ವೀಕರಿಸಿ ಸರ್ದಾರ್ ವಲ್ಲಭಭಾಯ್ ಪಟೇಲರ್ ಜನ್ಮ ದಿನೋತ್ಸವವನ್ನು ಆಚರಿಸಾಯಿತು.
ಈ ಸಂದರ್ಭದಲ್ಲಿ ಪ್ರಸಕ್ತ ವರ್ಷ ಪರಿಶಿಷ್ಟ ಪಂಗಡದಲ್ಲಿ ಜಿಲ್ಲೆಯಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಾಜಾ ಅನಿಕೇತನ ನಾಯಕ ದೊರೆ ಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಂದು ಲಕ್ಷ ಬಹುಮಾನವನ್ನು ಚೆಕ್ ಮೂಲಕ ನೀಡಿ ಸನ್ಮಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಹೆಚ್. ಕೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್. ಪುರುಷೋತ್ತಮ ಸೇರಿದಂತೆ ಇತರರು ಇದ್ದರು.