ಎಸ್.ಡಿ.ಎಂ ಆಸ್ಪತ್ರೆಯಲ್ಲಿ 32 ಸ್ಲೈಸ್ ಸಿ.ಟಿ ಸ್ಕ್ಯಾನ್ ಲೋಕಾರ್ಪಣೆ
ಉಜಿರೆ ಅ 29: ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸೀಮನ್ಸ್ 32 ಸ್ಲೈಸ್ ಸಿ.ಟಿ ಸ್ಕ್ಯಾನ್ ಉಪಕರಣ ಇಂದು ಲೋಕಾರ್ಪಣೆಗೊಂಡಿತು.
“ಹಳ್ಳಿಯ ಜನತೆಗೆ ಅತ್ಯಾಧುನಿಕ ವೈದ್ಯಕೀಯ ಸೇವೆ ಸಿಗುವಂತಾಗಬೇಕೆಂಬ ವೀರೇಂದ್ರ ಹೆಗ್ಗಡೆಯವರ ಆಶಯ ಎಸ್.ಡಿ.ಎಂ ಆಸ್ಪತ್ರೆಯ ಮೂಲಕ ಈಡೇರುತ್ತಿದೆ. ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಉಪಕರಣ, ನುರಿತ ವೈದ್ಯವೃಂದ ಹಾಗೂ ಅನುಭವಿ ಸಿಬ್ಬಂದಿಗಳನ್ನು ಬಳಸಿಕೊಂಡು ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ.” ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಡಾ| ಎಲ್ ಎಚ್ ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು, ಎಸ್ ಕೆ ಡಿ ಆರ್ ಡಿ ಪಿ, ಜಯಕರ ಶೆಟ್ಟಿ ಯೋಜನಾಧಿಕಾರಿ ಎಸ್ ಕೆ ಡಿ ಆರ್ ಡಿ ಪಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾದರು.
ಶಿಶುಪಾಲ ಪೂವಣಿ ಅತಿಥಿಗಳನ್ನು ಸ್ವಾಗತಿಸಿದರು. ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಎಂ. ಕಾಶೀನಾಥ ಶೆಣೈ ಧನ್ಯವಾದ ಸಮರ್ಪಿಸಿದರು. ಡಾ| ಸಾತ್ವಿಕ್ ಜೈನ್ ಅತಿಥಿಗಳನ್ನು ಹೂಗುಚ್ಚ ನೀಡಿ ಗೌರವಿಸಿದರು. ಆಸ್ಪತ್ರೆಯ ವೈದ್ಯವೃಂದ, ದಾದಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.