ಮಳೆಯಿಂದ 6.68 ಹೆಕ್ಟೇರ್ ಮಟ್ಟುಗುಳ್ಳ ಬೆಳೆ ಹಾನಿ
ಉಡುಪಿ, ಅ 19: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದ 29 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಹೇಳಿದರು.
ಅವರು ಇಂದು ಉಡುಪಿ ಜಿಲ್ಲೆಯ ಮಾಸಿಕ ಕೆಡಿಪಿ ಸಭೆಗೆ ಮಳೆ ಹಾನಿ ಕುರಿತು ಮಾಹಿತಿ ನೀಡಿದರು.
ಮಟ್ಟು ಸುತ್ತುಮುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ 6.68 ಹೆಕ್ಟೇರ್ ಮಟ್ಟುಗುಳ್ಳ ಬೆಳೆಗೆ ಹಾನಿಯಾಗಿದ್ದು, ಐವತ್ತ ನಾಲ್ಕು ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಎಕರೆಗೆ ₹ 20,000 ದಂತೆ ಪರಿಹಾರ ನೀಡಲು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೆ.15% ಅಧಿಕ ಮಳೆಯಾಗಿದೆ , 4,375 ಮಿ.ಮಿ. ವಾಡಿಕೆ ಮಳೆ ಇದ್ದು, 5,051 ಮಿ.ಮಿ ಮಳೆಯಾಗಿದೆ.
ಜಿಲ್ಲೆಯಲ್ಲಿ 273 ಹೆಕ್ಟೇರ್ ಬತ್ತದ ಬೆಳೆ ಹಾನಿಯಾಗಿದ್ದು, ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಹೇಳಿದರು.