ಕೊಂಚಾಡಿ ಕಾಶಿ ಮಠದಲ್ಲಿಅಧಿಕ ಮಾಸ ಪ್ರಯುಕ್ತ ವಿಶೇಷ ಯಾಗ ಯಜ್ಞಗಳು

 ಕೊಂಚಾಡಿ ಕಾಶಿ ಮಠದಲ್ಲಿಅಧಿಕ ಮಾಸ ಪ್ರಯುಕ್ತ ವಿಶೇಷ ಯಾಗ ಯಜ್ಞಗಳು
Share this post

ಮಂಗಳೂರು ಸೆ 19 : ಕೊಂಚಾಡಿ ಕಾಶಿ ಮಠದಲ್ಲಿ ಅಧಿಕ ಮಾಸ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಯಜ್ಞ ಹವನಾದಿ ಗಳನ್ನು ಆಯೋಜಿಸಲಾಗಿದೆ .

ಮಠದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ಮಹಾಭಾರತ ವನಪರ್ವ , ಸುಮಧ್ವ ವಿಜಯ ಪಾರಾಯಣ , ಪ್ರವಚನ , ನರಸಿಂಹ ಪುರಾಣ ಪಾರಾಯಣ , ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ , ಹರಿವಂಶ ಪಾರಾಯಣ , ಸಂತಾನ ಗೋಪಾಲ ಹವನ , ಶತಚಂಡಿ ಮಹಾ ಯಾಗ , ಇಂತಹ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ .

ಅಧಿಕಮಾಸದ ಪ್ರಥಮದಿನವಾದ ಶುಕ್ರವಾರ ಶ್ರೀ ದೇವಳದ ಯಜ್ಞ ಮಂಟಪದಲ್ಲಿ ಋಗ್ ಸಂಹಿತಾ ಯಾಗ ವು ಪ್ರಾರಂಭಗೊಂಡು ಶ್ರೀಗಳವರ ಅಮೃತ ಹಸ್ತಗಳಿಂದ ಯಜ್ಞ ಮಂಟಪದಲ್ಲಿ ದೀಪ ಪ್ರಜ್ವಲನೆಯ ಮುಖಾಂತರ ವಿಧ್ಯುಕ್ತವಾಗಿ ಯಜ್ಞವು ಪ್ರಾರಂಭಗೊಂಡಿತು .

ಈ ಯಾಗವು ಏಳು ದಿನಗಳ ಪರ್ಯಂತ ನಡೆಯಲಿದ್ದು ಕೊನೆಯದಿನದಂದು ಶ್ರೀಗಳವರ ದಿವ್ಯಹಸ್ತಗಳಿಂದ ಮಹಾ ಪೂರ್ಣ ಹುತಿ ನಡೆಯಲಿರುವುದು .

ಭಗವಾನ್‌ ವಿಷ್ಣುವನ್ನು ಅಧಿಕ ಮಾಸದ ಅಧಿಪತಿಯೆಂದು ಕರೆಯಲಾಗುತ್ತದೆ. ಪುರುಷೋತ್ತಮ ಎನ್ನುವ ಹೆಸರು ಕೂಡ ಭಗವಂತನಾದ ವಿಷ್ಣುವಿನ ಒಂದು ಹೆಸರೇ ಆಗಿದೆ. ಆದ್ದರಿಂದಲೇ ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಕೂಡ ಕರೆಯಲಾಗುತ್ತದೆ.

ಚಿತ್ರ : ಮಂಜು ನೀರೇಶ್ವಾಲ್ಯ

Subscribe to our newsletter!

Other related posts

error: Content is protected !!