ಅನುಮಾಸ್ಪದ ಬೀಜ ಪೊಟ್ಟಣ ಜೀವವೈವಿಧ್ಯತೆಗೆ ಹಾಗೂ ರಾಷ್ಟ್ರ ಭದ್ರತೆಗೆ ಗಂಭೀರ ಅಪಾಯವಾಗಬಹುದು

 ಅನುಮಾಸ್ಪದ ಬೀಜ ಪೊಟ್ಟಣ ಜೀವವೈವಿಧ್ಯತೆಗೆ ಹಾಗೂ ರಾಷ್ಟ್ರ ಭದ್ರತೆಗೆ ಗಂಭೀರ ಅಪಾಯವಾಗಬಹುದು
Share this post

ಕಾರವಾರ ಆ 28: ಅನುಮಾನಾಸ್ಪದ ಬೀಜಗಳ ಪೊಟ್ಟಣಗಳು ಅಜ್ಞಾತ ಮೂಲಗಳಿಂದ ಸಾಗಾಣಿಕೆಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬೀಜಗಳು ಹೊರಗಿನ ಆಕ್ರಮಣಕಾರಿ ತಳಿಯ  ಅಥವಾ ರೋಗಕಾರಕಗಳಾಗಿರಬಹುದು. ಇದು ಕೃಷಿ ಪರಿಸರ ವ್ಯವಸ್ಥೆಗೆ, ಜೀವವೈವಿಧ್ಯತೆಗೆ ಹಾಗೂ ರಾಷ್ಟ್ರ ಭದ್ರತೆಗೆ ಗಂಭೀರ ಅಪಾಯವಾಗಬಹುದು. 

ಆದ್ದರಿಂದ ಜಿಲ್ಲೆಯ ರೈತ ಬಾಂಧವರು ಅನುಮಾನಾಸ್ಪದ ಬೀಜಗಳ ಪೊಟ್ಟಣಗಳನ್ನು ಖರೀದಿಸಲು ಮತ್ತು ಸ್ವೀಕರಿಸಲು ಮುಂದಾಗಬಾರದು.  ಒಂದು ವೇಳೆ ಇಂತಹ  ಪ್ರಕರಣಗಳು ಕಂಡು ಬಂದಲ್ಲಿ ಜಿಲ್ಲೆಯ ರೈತರು  ಹತ್ತಿರದ  ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಜಂಟಿ ಕೃಷಿ ನಿರ್ದೇಶಕರ  ಕಚೇರಿಗೆ ಕೂಡಲೇ  ವರದಿ ಮಾಡುವಂತೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಹೊನ್ನಪ್ಪಗೌಡ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!