Tags :Mangaluru City Corporation

ಕನ್ನಡ

ವಾರ್ಡ್ ಸಮಿತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಮಂಗಳೂರು ನ 18:  ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್‍ಗಳಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಸಾಂವಿಧಾನಿಕವಾಗಿ ವಾರ್ಡ್ ಸಮಿತಿಗಳನ್ನು ರಚಿಸಲು ಪಾಲಿಕೆಯ ವ್ಯಾಪ್ತಿಯೊಳಗಿನ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 4 ರ ವರೆಗೆ ವಿಸ್ತರಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

ಕನ್ನಡ

ಕುಡಿಯುವ ನೀರಿನ ಸಮಸ್ಯೆ – ದೂರು ನೀಡಿ

ಮಂಗಳೂರು ನ 7 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವಿಭಾಗದಲ್ಲಿ ಸಮಸ್ಯೆಗಳು ಇದ್ದಲ್ಲಿ ಕಛೇರಿಯ ದೂರವಾಣಿ ಸಂಖ್ಯೆ: 0824-2220399 ನ್ನು ಸಂಪರ್ಕಿಸುವಂತೆ ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

ಕನ್ನಡ

ನೀರಿನ ಬಿಲ್ ಬಗ್ಗೆ ತಕರಾರು- ಅರ್ಜಿ ಸಲ್ಲಿಸಲು ಅವಕಾಶ

ಮಂಗಳೂರು ಅ 25: ಮಹಾನಗರಪಾಲಿಕೆಯಿಂದ ನೀಡಲಾದ ನೀರಿನ ಬಿಲ್ಲಿನಲ್ಲಿ ಹೆಚ್ಚುವರಿ ಬಂದಿರುವ ಬಗ್ಗೆ ಅಥವಾಇತರಯಾವುದೇ ತಕರಾರುಗಳು ಇದ್ದಲ್ಲಿ ನವೆಂಬರ್ 5 ರೊಳಗೆ ಮಹಾನಗರಪಾಲಿಕೆಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಗಳನ್ನು ಮಹಾನಗರಪಾಲಿಕೆಯ ನೀರಿನ ಅದಾಲತ್ ಸಭೆಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

ಕನ್ನಡ

ಅನಧಿಕೃತ ಮಾಂಸ ಮಾರಾಟ ಕಂಡುಬಂದಲ್ಲಿ ಪರವಾನಿಗೆ ರದ್ದು: ಮೇಯರ್ ಎಚ್ಚರಿಕೆ

ಮಂಗಳೂರು ಅ 23 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಅನೇಕ ಆಕ್ಷೇಪಿತ ದೂರುಗಳು ಬಂದಿರುವುದರಿಂದ ಇನ್ನು ಮುಂದಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಬೀಫ್ ಸ್ಟಾಲ್‍ನಲ್ಲಿ ಬೇರೆ ರಾಜ್ಯ, ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡದಂತೆ ಸಂಬಂಧಿತ ಮಾಲಕರು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಅನಧಿಕೃತವಾಗಿ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಸ್ಟಾಲಿನ ಪರವಾನಿಗೆಯನ್ನು ರದ್ದುಪಡಿಸಲಾಗುತ್ತದೆ. ಹಾಗೂ ಪಾಲಿಕೆ […]Read More

ಕನ್ನಡ

ಮಾರುಕಟ್ಟೆ ಮೌಲ್ಯ – ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ಅವಕಾಶ

ಮಂಗಳೂರು ಅ 14: ಕೇಂದ್ರೀಯ ಉಪನೊಂದಣಿ ಕಚೇರಿ, ಮಂಗಳೂರು  ನಗರದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾಪನ ಉಪಸಮಿತಿಯು  2019 ನೇ ಸಾಲಿನಲ್ಲಿ ಹೊಸ ಹಾಗೂ ಹಳೆಯ ಬಿಟ್ಟು ಹೋದ ಅಪಾರ್ಟ್‍ಮೆಂಟ್‍ಗಳ ಮಾರುಕಟ್ಟೆ ಮೌಲ್ಯವನ್ನು ನಿಗಧಿಪಡಿಸಿ, ಹಾಗೂ ಅಪಾರ್ಟ್‍ಮೆಂಟ್‍ಗಳ ಹೆಸರು ಮತ್ತು ಇದರ ರಸ್ತೆಗಳ ಹೆಸರು ತಿದ್ದುಪಡಿಗೆ ಸಂಬಂಧಪಟ್ಟ ಕಚೇರಿಯಲ್ಲಿ ಸಾರ್ವಜನಿಕ ಆಕ್ಷೇಪಣೆಗಳಿಗಾಗಿ ಈಗಾಗಲೇ ಪ್ರಕಟಿಸಲಾಗಿದೆ. ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ 15 ದಿವಸದೊಳಗೆ ಸಲ್ಲಿಸಬೇಕೆಂದು ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿ, ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ […]Read More

Dakshina Kannada

ಪಾಲಿಕೆ ವ್ಯಾಪ್ತಿಯ ಬೀದಿ ವ್ಯಾಪಾರಸ್ಥರ ಸಮೀಕ್ಷೆ

ಮಂಗಳೂರು ಅ 05: “ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ” ಕಾರ್ಯಕ್ರಮದಡಿಯಲ್ಲಿ ‘ಬೀದಿ ವ್ಯಾಪಾರಸ್ಥರಿಗೆ ಬೆಂಬಲ’ ಘಟಕವನ್ನು ಅನುಷ್ಟಾನಗೊಳಿಸುತ್ತಿದ್ದು,  ಈ ಘಟಕದಡಿಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಬೀದಿ ವ್ಯಾಪಾರಸ್ಥರ ಸಮೀಕ್ಷೆ ನಡೆಸಿ ಗುರುತು ಚೀಟಿ ಮತ್ತು ವ್ಯಾಪಾರದ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಬೀದಿ ಬದಿಗಳಲ್ಲಿ ವ್ಯಾಪಾರ ನಡೆಸುವ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆಯನ್ನು ಕೈಗೊಳ್ಳಲು ಆಸಕ್ತ ಸ್ವಯಂ-ಸೇವಾ ಸಂಸ್ಥೆ/ಸ್ವ-ಸಹಾಯ ಗುಂಪು/ಸಮಾಲೋಚಕರ ಸಂಸ್ಥೆಗಳು ಉಪ ಆಯುಕ್ತರು […]Read More

Dakshina Kannada

ಅ 5 ಮತ್ತು 6 ರಂದು ನೀರಿನ ಸರಬರಾಜಿನಲ್ಲಿ ವ್ಯತ್ಯಯ

ಮಂಗಳೂರು ಅ:  ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‍ವೆಲ್‍ ಶುಚಿಗೊಳಿಸುವ ಕೆಲಸ ನಡೆಯಲಿದೆ. ಈ ಕಾರಣದಿಂದ ಅಕ್ಟೋಬರ್  5 ರಂದು ಬೆಳಿಗ್ಗೆ 6 ಗಂಟೆಯಿಂದ ಅಕ್ಟೋಬರ್  6 ಬೆಳಗ್ಗೆ 6 ಗಂಟೆಯವರೆಗೆ 24 ಗಂಟೆ ಅವಧಿಯಲ್ಲಿ ಪಡೀಲ್, ಮಂಗಳಾದೇವಿ, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಉಲ್ಲಾಸ್‍ನಗರ, ಮುಳಿಹಿತ್ಲು, ಕಾರ್‍ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್‍ಬ್ಯಾಂಕ್  ಇತ್ಯಾದಿ […]Read More

error: Content is protected !!