ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ತೋಟಗಾರಿಕೆ ಕಸಿ/ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. Read More
ಉಡುಪಿ, ಡಿ 05 2020: ಉಡುಪಿ ಸರಕಾರಿ ಐ.ಟಿ.ಐ ಸಂಸ್ಥೆಯಲ್ಲಿ ಐ.ಟಿ.ಐ ಕೋರ್ಸುಗಳಲ್ಲಿಖಾಲಿ ಉಳಿದಿರುವ ಕೆಲವು ಸ್ಥಾನಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಸಂಸ್ಥೆಗೆ ದಾಖಲಾತಿಗಳೊಂದಿಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ: 0820-2986145 ಅನ್ನು ಸಂಪರ್ಕಿಸುವAತೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More
ಕಾರವಾರ ಡಿಸೆಂಬರ್ 5, 2020: ಕಾರವಾರ ವಿಭಾಗೀಯ ಅಂಚೆ ಪಿಂಚಣಿ ಅದಾಲತ್ ಡಿ 29 ರಂದು ಬೆಳಿಗ್ಗೆ 11 ಕ್ಕೆ ಕಾರವಾರ ಅಂಚೆ ಅಧೀಕ್ಷಕರ ಕಾರ್ಯಾಲಯ ದಲ್ಲಿ ನಡೆಯಲಿದೆ. ಕಾರವಾರ ವಿಭಾಗದಲ್ಲಿ ನಿವೃತ್ತಿ ಹೊಂದಿರುವ ಅಂಚೆ ಪಿಂಚಣಿದಾರರು ಮಾತ್ರ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಗ್ರಾಮೀಣ ಅಂಚೆ ಇಲಾಖೆಯ ಮೂಲಕ ಪಿಂಚಣಿ ಪಡೆಯುತ್ತಿರುವ ಇತರೆ ನೌಕರರಿಗೆ ಯಾವುದೆ ಅವಕಾಶ ಇರುವುದಿಲ್ಲ ಹಾಗೂ ಭತ್ಯೆ ಕೊಡಲಾಗುವುದಿಲ್ಲ. ಪಿಂಚಣಿದಾರರು ತಮಗೆ ಬಂದಿರುವ ಸಮಸ್ಯೆಗಳನ್ನು ಲಿಖಿತವಾಗಿ ತಮ್ಮ ವಿವರ, ವಿಳಾಸ ಪಿ. ಪಿ. ಒ […]Read More
ಮಂಗಳೂರು,ಡಿ 04: ಮಂಗಳೂರು ವಿಶ್ವವಿದ್ಯಾನಿಲಯ ಶೀಘ್ರದಲ್ಲೇ ಯುಜಿಸಿ ನಿಯಮಗಳನ್ನು ಆಧರಿಸಿ ನವೀಕೃತ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಿದ್ದು ವಿದ್ಯಾರ್ಥಿಗಳು, ಪೋಷಕರು ಮತ್ತು ಪ್ರಾಧ್ಯಾಪಕರು ಆತಂಕಿತರಾಗಬೇಕಿಲ್ಲ ಎಂದು ಕುಲಸಚಿವ ಕೆ. ರಾಜುಮೊಗವೀರ ಹೇಳಿದ್ದಾರೆ. ಕುಲಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ನಗರದ ವಿಶ್ವವಿದ್ಯಾನಿಲಯ ಕಾಲೇಜಿಗೆ ಬುಧವಾರ ಮೊದಲ ಬೇಟಿ ನೀಡಿದ ಅವರು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ಪದವಿಯ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿ ಪಾಠ ಆರಂಭಿಸುವ ಕುರಿತು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳ ಸಭೆಯನ್ನೂ ನಡೆಸಲಾಗಿದೆ. […]Read More
ಕಾರವಾರ, ಡಿಸೆಂಬರ್ 04, 2020: ಗೃಹರಕ್ಷಕ ದಳದ ಹೆಸರನ್ನು ಕರ್ನಾಟಕ ಪ್ಯಾರಾ ಪೊಲೀಸ್ ಪಡೆಗೆ ಬದಲಾಯಿಸಲು ಮತ್ತು ಪೊಲೀಸ್ ಇಲಾಖಾ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ಸಹಿತ ಗೃಹರಕ್ಷಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ತೆಲಂಗಾಣ ಮಾದರಿಯಂತೆ ಒದಗಿಸುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಕರ್ನಾಟಕ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವವರ ಪರ ಹೋರಾಟ ಕೈಗೆತ್ತಿಕೊಂಡಿರುವ ಮಾಧವ ನಾಯಕ ಅವರು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕಾರವಾರದಲ್ಲಿ ಭೇಟಿಯಾಗಿ ಮನವಿ […]Read More
ಮಂಗಳೂರು ಡಿಸೆಂಬರ್ 4, 2020: ಕೊವೀಡ್-19 ಲಾಕ್ಡೌನ್ನಿಂದಾಗಿ ಕದ್ರಿ ಜಿಂಕೆ ಉದ್ಯಾವನದ ಲೇಸರ್ ಶೋ ಸಂಗೀತ ಕಾರಂಜಿ ವೀಕ್ಷಣೆಗೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಇದೀಗ ಡಿಸೆಂಬರ್ ತಿಂಗಳ ಶನಿವಾರ ಮತ್ತು ಭಾನುವಾರ ಮಾತ್ರ ಲೇಸರ್ ಶೋ ಸಂಗೀತ ಕಾರಂಜಿ ವೀಕ್ಷಣೆಗೆ ಸಾರ್ವಜನಿಕ ಪ್ರವೇಶಕ್ಕೆ ತಾತ್ಕಲಿಕವಾಗಿ ಅವಕಾಶವನ್ನು ಕಲ್ಪಿಸಲಾಗಿದೆ. ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More
ಉಡುಪಿ ಡಿ 03 2020: ಶೈಕ್ಷಣಿಕವಾಗಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟ ಜಿಲ್ಲೆಯಾಗಿದೆ. ಇಲ್ಲಿಗೆ ಗ್ರಾಮೀಣ ಭಾಗಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದಾರೆ. ಇವರಿಗೆ ಉಳಿದುಕೊಳ್ಳಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿಗೆ ಮಹಿಳಾ ಹಾಸ್ಟೆಲ್ ಮಂಜೂರು ಮಾಡಿ ಎಂದು ಶಾಸಕ ರಘುಪತಿ ಭಟ್ ಅವರು ಗೃಹ ಸಚಿವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶ್ರೀ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು. ಡಿಸೆಂಬರ್ 3 ರಂದು ಬಾಲಕಿಯರ […]Read More
ಉಡುಪಿ, ಡಿ 03, 2020: ಶ್ರೀ ಕೃಷ್ಣ ಮಠದಲ್ಲಿ,ಕನಕ ಜಯಂತಿಯ ಪ್ರಯುಕ್ತ ರಥಬೀದಿಯಲ್ಲಿರುವ ಕನಕಗುಡಿಯಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಕನಕದಾಸರ ಪುತ್ಥಳಿಗೆ ಪೂಜೆ ಸಲ್ಲಿಸಿದರು. “ಕನಕದಾಸರು ಕೀರ್ತಿಯ ಕಡೆಗೆ ಮುಖಮಾಡದೆ ಯಶಸ್ಸನ್ನು ಗಳಿಸಿದರು. ನಾವೂ ಕೂಡ ಅವರ ಕೀರ್ತನೆಗಳ ಅರ್ಥವನ್ನು ಗ್ರಹಿಸಿ ಬದುಕಿನಲ್ಲಿ ಭಗವಂತನನ್ನು ಕಾಣಬೇಕು,” ಎಂದು ರಾಜ್ಯದೆಲ್ಲೆಡೆಯಿಂದ ಬಂದ ಭಕ್ತರೆಲ್ಲರಿಗೂ ಅನುಗ್ರಹಿಸಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಸಭೆಯಲ್ಲಿ ಆರ್.ಎಸ್.ಎಸ್ ನ ಜಿಲ್ಲಾ ಸಂಘಟಕರಾದ ನಾರಾಯಣ ಶೆಣೈ ಹಾಗೂ ಕನಕ ಸದ್ಭಾವನಾ […]Read More
ಉಡುಪಿ, ಡಿಸೆಂಬರ್ 03, 2020: ಉಡುಪಿ ಶ್ರೀ ಕೃಷ್ಣ ಮಠದ ಪ್ರವೇಶದ್ವಾರದಲ್ಲಿ ಕನ್ನಡ ನಾಮ ಫಲಕವನ್ನು ಅಳವಡಿಸಲಾಗಿದೆ. ಇತ್ತೀಚಿಗೆ ಕೃಷ್ಣ ಮಠದ ಪ್ರವೇಶ ದ್ವಾರದಲ್ಲಿ ಅಳವಡಿಸಲ್ಪಟ್ಟ ಫಲಕದಲ್ಲಿ ಕೇವಲ ಸಂಸ್ಕೃತ ಮತ್ತು ತುಳು ಭಾಷೆಯ ಲಿಪಿಯಲ್ಲಿ ಬರೆಯಲಾಗಿತ್ತು (ಹಳೆಯ ಫಲಕದಲ್ಲಿ ಕನ್ನಡ ಭಾಷೆ ಇತ್ತು).ಹೊಸ ಫಲಕದಲ್ಲಿ ಕನ್ನಡ ಬರಹ ಇಲ್ಲದ ಕಾರಣ ಕನ್ನಡಪರ ಸಂಘಟನೆಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. “ಹಳೆಯ ಪ್ಲಾಸ್ಟಿಕ್ ಫಲಕ ತೆಗೆದು ಹೊಸ ಮರದ ಫಲಕ ಅಳವಡಿಸುವ ಕೆಲಸ ನಡೆಯುತ್ತಿದೆ. ಸಂಸ್ಕೃತ ಹಾಗೂ ತುಳು […]Read More