ಬೇಕರಿ ಉತ್ಪನ್ನಗಳ ತಯಾರಿಕೆ ಬಗ್ಗೆ ಪ್ರಾಯೋಗಿಕ ತರಬೇತಿ
ಕಾರವಾರ ಅ 30: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ರಾಜ್ಯ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ (ಸಿಡಾಕ್), ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಕಾರವಾರ ಮತ್ತು ಅರುಣೋದಯ ತರಬೇತಿ ಕೇಂದ್ರ ಶಿರಸಿಯ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 7 ರಿಂದ 30 ದಿನಗಳ ವರೆಗೆ ಶಿರಸಿಯ ಅರುಣೋದಯ ತರಬೇತಿ ಕೇಂದ್ರದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕೆ ಕೌಶಲ್ಯ ಹಾಗೂ ಉದ್ಯಮಶೀಲತಾ ಅಭಿವೃದ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಯಮಶೀಲತೆಯ ಮಹತ್ವ ಹಾಗೂ ಉದ್ಯಮಶೀಲರ ಸಾಮರ್ಥ್ಯಗಳು, ಉದ್ಯಮಶೀಲರಾಗುವುದಕ್ಕೆ ಪ್ರೇರಣಾತ್ಮಕ ಅಂಶಗಳು, ತಾಲೂಕಿನಲ್ಲಿ ಲಭ್ಯವಿರುವ ಸಂಪನ್ಮೂಲಗಳು ಮತ್ತು ಉದ್ಯಮ ಪ್ರಾರಂಭಿಸುವಲ್ಲಿ ಸಹಾಯ ನೀಡುತ್ತಿರುವ ಸಂಸ್ಥೆಗಳ ಪಾತ್ರ, ಸರ್ಕಾರದ ಯೋಜನೆಗಳು ಹಾಗೂ ಉದ್ಯಮ ಪ್ರಾರಂಭಿಸಲು ಬ್ಯಾಂಕಿನಿಂದ ಸಿಗುತ್ತಿರುವ ಸೌಲಭ್ಯಗಳ ಮಾಹಿತಿ ನೀಡಲಾಗುವುದು ಎಂದು ಕಾರವಾರದ ರಾಜ್ಯ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ ಸಿಡಾಕ್ನ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳು 18-40 ವಯಸ್ಸಿನ ವಯೋಮಿತಿ ಹೂಂದಿರಬೇಕು ಹಾಗೂ ಸ್ವಂತ ಉದ್ಯಮ ಪ್ರಾರಂಭಿಸಲು ಆಸಕ್ತಿಯುಳ್ಳ ಯುವಕ, ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಬಿಳಿ ಹಾಳೆಯ ಮೇಲೆ ತಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ, ಅನುಭವ ಮುಂತಾದ ವಿವರಗಳನ್ನು ನಮೂದಿಸಿ ತಮ್ಮ ಅರ್ಜಿಯನ್ನು ಶಿರಸಿಯ ಅರುಣೋದಯ ತರಬೇತಿ ಕೇಂದ್ರದಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 5 ಕೊನೆಯ ದಿನವಾಗಿದ್ದು, ನವೆಂಬರ್ 6 ರಂದು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶಿವಾನಂದ ವೆಂ. ಎಲಿಗಾರ, ಉಪ ನಿರ್ದೇಶಕರು, ಸಿಡಾಕ್, ಶಿರವಾಡ, ಕಾರವಾರ ಮೊಬೈಲ್ ಸಂಖ್ಯೆ: 9448812974, ಶಿವರಾಜ ಹೆಳವಿ, ಸಿಡಾಕ್-ದಿಶಾ, ಕಾರವಾರ ಮೋಬೈಲ್ ಸಂಖ್ಯೆ: 9742983817 ಹಾಗೂ ಅರುಣೋದಯ ತರಬೇತಿ ಕೇಂದ್ರ, ತಾಲೂಕು ಪಂಚಾಯತ ಎದುರುಗಡೆ, ಶಿರಸಿ ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಿಡಾಕ್ನ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.