ಉಡುಪಿ: ಅರಣ್ಯ ಇಲಾಖೆಯ ಸಸಿಗಳಿಗೆ ಪರಿಷ್ಕೃತ ದರ ನಿಗದಿ
ಉಡುಪಿ, ಜುಲೈ 21, 2023: ಸಾರ್ವಜನಿಕರ ವಿತರಣೆಗಾಗಿ ಅರಣ್ಯ ಇಲಾಖೆಯ ಎಲ್ಲಾ ಯೋಜನೆಗಳ ಅಡಿಯಲ್ಲಿ ಬೆಳೆಸಲಾಗುವ ಸಸಿಗಳು ಹಾಗೂ ಕಸಿ ಮಾಡಿದ ಸಸಿಗಳನ್ನು ಮಾರಾಟ ಮಾಡಲು 5*8 ಗಾತ್ರಕ್ಕೆ 2 ರೂ., 6*9 ಗಾತ್ರಕ್ಕೆ 3 ರೂ ಹಾಗೂ 8*12 ಗಾತ್ರಕ್ಕೆ 6 ರೂ. ನಂತೆ ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿರುತ್ತದೆ.
ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗದಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಜಾತಿ ಮತ್ತು ಅಳತೆಯ ಗಿಡಗಳನ್ನು ಸಾರ್ವಜನಿಕ ವಿತರಣೆಗಾಗಿ ಕಾರ್ಕಳ, ಕುಂದಾಪುರ ಹಾಗೂ ಉಡುಪಿ ಸಾಮಾಜಿಕ ಅರಣ್ಯ ವಲಯದ ವಿವಿಧ ಸಸ್ಯಕ್ಷೇತ್ರಗಳಲ್ಲಿ ಮಹಾಗನಿ, ನೇರಳೆ, ಹಲಸು, ಹೆಬ್ಬಲಸು, ಲಕ್ಷ್ಮಣ ಫಲ, ಬಾದಾಮಿ, ಶ್ರೀಗಂಧ, ಕದಂಬ, ಸಾಗುವಾನಿ, ನೆಲ್ಲಿ, ಬಿಲ್ವಪತ್ರೆ, ಪುನರ್ ಪುಳಿ, ಗೇರು, ನುಗ್ಗೆ, ಸೀಮಾರೂಬ, ಬೇಂಗ, ಸಿಹಿ ಹುಣಸೆ, ಪೇರಳೆ, ಬೀಟೆ, ಸೀಮತಂಗಡಿ, ಬೇಲ, ಸೈತೋಡಿಯಾ, ದಾಳಿಂಬೆ, ಲಿಂಬೆ, ಸೀತಾಫಲ, ರಕ್ತಚಂದನ, ಜಂಬು ನೇರಳೆ, ಹೊಳೆದಾಸವಾಳ, ರೆಂಜ, ಮಾವು, ಅಶ್ವಥ, ಟೊಕೊಮೋ, ಕಕ್ಕೆ, ಗುಲ್ಮಾವು, ರಂಬುಟನ್, ಬಸವನಪಾದ, ಸಿರಿಹೊನ್ನೆ, ಹೊಂಗೆ, ಗಾಳಿ ಮೊದಲಾದ ಜನಪಯೋಗಿ ಸಸ್ಯಗಳು ಲಭ್ಯವಿದ್ದು, ಇದನ್ನು ಸಾರ್ವಜನಿಕರಿಗೆ, ಸಂಘ- ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು.
ಉಡುಪಿ ಸಾಮಾಜಿಕ ಅರಣ್ಯ ವಲಯದ ಪಕ್ಕಾಲುವಿನ ಪೆರ್ಡೂರು ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ ಒಟ್ಟು 28,000 ಸಸಿಗಳು ಲಭ್ಯವಿದ್ದು, ಮೊ.ನಂ: 9481996815, ಕಾರ್ಕಳ ಸಾಮಾಜಿಕ ಅರಣ್ಯ ವಲಯದ ಕೂಡಬೆಟ್ಟುವಿನ ಮಾಳ- ಕೂಡಿಗೆ ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ 40,000 ಸಸಿಗಳು ಲಭ್ಯವಿದ್ದು, ದೂ.ಸಂಖ್ಯೆ: 08258-298765, ಮೊ.ನಂ: 9481996813 ಹಾಗೂ ಕುಂದಾಪುರ ಸಾಮಾಜಿಕ ಅರಣ್ಯ ವಲಯದ ಹಾಲಾಡಿ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ 33,700 ಸಸಿಗಳು ಲಭ್ಯವಿದ್ದು, ದೂ.ಸಂಖ್ಯೆ: 08254-295098, ಮೊ.ನಂ: 9481996814 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.