ಉಜಿರೆ: ವಿದ್ಯಾರ್ಥಿಗಳಿಗೆ ಪುಟ ವಿನ್ಯಾಸ ತರಬೇತಿ
ಉಜಿರೆ, ನ 04, 2022: ಉಜಿರೆ ಎಸ್.ಡಿ. ಎಂ. ಕಾಲೇಜಿನಲ್ಲಿ ಪತ್ರಿಕೆ ವಿನ್ಯಾಸದಕುರಿತು ಒಂದು ದಿನದ ಕಾರ್ಯಾಗಾರವನ್ನುಅ. 31 ರಂದು ಏರ್ಪಡಿಸಲಾಗಿತ್ತು. ಎಲ್ಲಾ ವಿಭಾಗದ ಆಯ್ದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಹಾಜರಿದ್ದರು. ಪುಟ ವಿನ್ಯಾಸ, ಚಿತ್ರಜೋಡಣೆ, ಬಣ್ಣಗಳ ಹೊಂದಾಣಿಕೆಯ ಕುರಿತು ಮೊದಲ ಹಂತದ ಮಾಹಿತಿಯನ್ನು ನೀಡಲಾಯಿತು.
ಬೆಳಿಗ್ಗೆ 9.30 ರಿಂದ ಆರಂಭವಾದ ಈ ಕಾರ್ಯಾಗಾರವು ಸಂಜೆ 5 ರವರೆಗೂ ಜರುಗಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಟ ವಿನ್ಯಾಸದ ಬಗ್ಗೆ ಮಾಹಿತಿ ಹೊಂದುವಂತಾಗಬೇಕು ಹಾಗೂ ಪ್ರತಿಯೊಂದು ವಿಭಾಗದಿಂದ ಇ- ಜರ್ನಲ್ಗಳನ್ನು ಹೊರತರಲು ಪ್ರೋತ್ಸಾಹಿಸವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿತ್ತು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗಡೆ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪುಟ ವಿನ್ಯಾಸ ತರಬೇತಿಯನ್ನು ಪತ್ರಿಕೊದ್ಯಮ ವಿಭಾಗದ ಸ್ನಾತಕೊತ್ತರ ವಿದ್ಯಾರ್ಥಿಗಳಾದ ಅರ್ಪಿತ್, ಸಿಂಧು ಹೆಗಡೆ, ಆಶಿಷ್ ಹಾಗೂ ಸುಚೇತಾ ನಡೆಸಿದರು.