ಕಡಲ ಪಾಚಿ ಕೃಷಿ ಕುರಿತು ಉಚಿತ ತರಬೇತಿ
ಕಾರವಾರ ಜ. 31, 2022: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಸಹಭಾಗಿತ್ವದಲ್ಲಿ ಉತ್ಸಾಹಿ ಕೃಷಿಕರಿಗೆ ಕಡಲ ಪಾಚಿ ಕೃಷಿ ಕುರಿತಂತೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ.
ತರಬೇತಿಯು 25ದಿನಗಳದ್ದಾಗಿದ್ದು, ಅಂಕೋಲಾದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ (ಕಡಲ) ಬೇಳಾದಲ್ಲಿ ತರಬೇತಿ ನೀಡಲಾಗುವುದು. 10ನೇ ತರಗತಿ ಪಾಸಾದ 18ರಿಂದ 35 ವರ್ಷ ವಯಸ್ಸಿನ ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ http://skillconnect.kaushalkar.com/app/seaWeedCultivator ನಲ್ಲಿ ನೋಂದಾಯಿಸಿಕೊಳ್ಳಲು ಫೆ. 4 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ 7975633671ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.