ಡಿ. 16 ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ
ಕಾರವಾರ ಡಿ.15, 2021: ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ರಂಗಮಂದಿರದಲ್ಲಿ ಡಿ. 16 ರಂದು ನೆಹರು ಯುವಕ ಕೇಂದ್ರ, ಎನ್.ಎಸ್.ಎಸ್ ಮತ್ತು ಜಿಲ್ಲಾ ಯುವ ಒಕ್ಕೂಟ, ಇವರ ಸಹಯೋಗದೊಂದಿಗೆ ನಡೆಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಗೀತೆ, ಏಕಾಂಕ ನಾಟಕ, ಶಾಸ್ತ್ರೀಯ ಗಾಯನ:-(ಹಿಂದುಸ್ತಾನಿ ಮತ್ತು ಕರ್ನಾಟಕ ಶೈಲಿ) ಶಾಸ್ತ್ರೀಯ ವಾದನ( ಸಿತಾರ್, ಕೊಳಲು,ತಬಲಾ, ವೀಣೆ, ಮೃದಂಗ) ಹಾರ್ಮೋನಿಯಂ(ಲಘು), ಗೀಟಾರ್, ಶಾಸ್ತ್ರೀಯ ನೃತ್ಯ (ಮಣಿಪುರಿ, ಒಡಿಸ್ಸಿ, ಕಥಕ್, ಕೂಚಿಪುಡಿ, ಭರತನಾಟ, ಆಶುಭಾಷಣದಂತಹ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವಕ/ಯುವತಿಯರು/ಶಾಲಾ/ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿರುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಯೋಮಿತಿಯು 15 ರಿಂದ 29 ವರ್ಷದೊಳಗಿರಬೇಕು ಹಾಗೂ ವಯೋಮಿತಿಯ ಬಗ್ಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ ಶಾಲಾ ವರ್ಗಾವಣೆಯ ದೃಢೀಕರಣ ಪತ್ರದ ಪ್ರತಿ ಅಥವಾ ಶಾಲೆಯಿಂದ ಹುಟ್ಟಿದ ದಿನಾಂಕದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರುವುದು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಳಿಗ್ಗೆ 9-30 ಗಂಟೆ ಒಳಗೆ ಮೇಲ್ಕಂಡ ವಿಳಾಸದಲ್ಲಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳುವುದು. ಹಾಗೂ ಕೋವಿಡ್ 19 ಪ್ರಯುಕ್ತ 72 ಗಂಟೆಗಳ ಅವಧಿಯೊಳಗೆ ಆರ್‍ಪಿಟಿಸಿಆರ್ ಟೆಸ್ಟ್ ವರದಿ ತರುವುದು ಕಡ್ಠಾಯವಾಗಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದ ಯುವಕ/ಯುವತಿಯರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ಕೋರಿದ್ದಾರೆ.