ಗ್ರಾಹಕರ ಆಯೋಗ : ಅವಧಿ ಮೀರಿದ ಕಡತ ನಾಶ

 ಗ್ರಾಹಕರ ಆಯೋಗ : ಅವಧಿ ಮೀರಿದ ಕಡತ ನಾಶ
Share this post

ಉಡುಪಿ, ಜುಲೈ 29, 2021: ರಾಜ್ಯ ಗ್ರಾಹಕರ ಆಯೋಗದ ಆದೇಶದಂತೆ 2009 ರಿಂದ 2015  ನೇ ಸಾಲಿನ ವರೆಗಿನ ಕಡತಗಳಲ್ಲಿ ಅಂತಿಮ ಆದೇಶದ ವಿರುದ್ಧ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಜ್ಯ ಘನ ಉಚ್ಛ ನ್ಯಾಯಾಲಯ ಹಾಗೂ ಭಾರತ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಯಾವುದಾದರೂ ಮೇಲ್ಮನವಿ ಅಥವಾ ರಿಟ್ ಅರ್ಜಿ, ಪುನರ್ ಪರಿಶೀಲನಾ ಅರ್ಜಿಗಳು ದಾಖಲಾಗಿದ್ದರೆ ಅಥವಾ ತಡೆಯಾಜ್ಞೆ ಇದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಗಮನಕ್ಕೆ ತರಬಹುದಾಗಿದೆ.

ಕಡತಗಳಲ್ಲಿ ಸಲ್ಲಿಸಿರುವ ಮೂಲ ದಾಖಲೆಗಳು ಅವಶ್ಯವಿದ್ದಲ್ಲಿ ಆಗಸ್ಟ್ 2 ರಿಂದ ಸೆಪ್ಟಂಬರ್ 1 ರ ವರೆಗೆ ತೆಗೆದುಕೊಳ್ಳಬಹುದು.

ನಂತರ ಮೂಲ ದಾಖಲೆಗಳಿಗೆ ಸದರಿ ಆಯೋಗವು ಜವಾಬ್ದಾರಿ ಹೊಂದಿರುವುದಿಲ್ಲ. ಸೆಪ್ಟಂಬರ್ 2 ರ ನಂತರ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!