ಕಾರವಾರ : ಒಂಬುಡ್ಸಮನ್ ಕಛೇರಿ ಪುನರಾರಂಭ

 ಕಾರವಾರ : ಒಂಬುಡ್ಸಮನ್ ಕಛೇರಿ ಪುನರಾರಂಭ
Share this post

ಕಾರವಾರ ಜುಲೈ 28, 2021: ಕೋವಿಡ-19 ಕಾರಣದಿಂದ ಸುಮಾರು ಎರಡು ತಿಂಗಳಿಂದ ಸ್ಥಗಿತವಾಗಿದ್ದ ಉತ್ತರ ಕನ್ನಡ ಜಿಲ್ಲಾ ಒಂಬುಡ್ಸಮನ್ ಕಾರ್ಯಾಲಯದ ಕಾರ್ಯನಿರ್ವಹಣೆಯನ್ನು ಪುನಃ ಪ್ರಾರಂಭಿಸಲಾಗಿದೆ.

ಬಾಕಿ ಇರುವ ಹಾಗೂ ಈ ಎರಡು ತಿಂಗಳ ಅವಧಿಯಲ್ಲಿ ಸ್ವಿಕೃತವಾದ ಪ್ರಕರಣ, ದೂರುಗಳಿಗೆ ಸಂಬಂಧಿಸಿದಂತೆ ಈ ಕೂಡಲೇ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾ, ತಾಲೂಕಾ ಮತ್ತು ಗ್ರಾಮ ಪಂಚಾಯತ್ ಅನಿಷ್ಟಾನಗೊಳಿಸುವ ಕಾಮಗಾರಿಗಳಲ್ಲಿ ಯೋಜನಾ ಮಾರ್ಗಸೂರ್ಚಿಗಳ ಉಲ್ಲಂಘನೆ, ಕೂಲಿಕಾರರ ಬದಲು ಯಂತ್ರಗಳ ಬಳಕೆ, ಗುತ್ತಿಗೆದಾರ ಬಳಕೆ, ಕಳಪೆ ಕಾಮಗಾರಿ, ಹಣ ದುರುಪಯೋಗ ಅಥವಾ ಗ್ರಾಮೀಣ ಕೂಲಿಕಾರರಿಗೆ ಮತ್ತು ಯೋಜನೆಯಡಿ ಫಲಾನುಭವಿಗಳಿಗೆ ಏನಾದರೂ ವಂಚನೆಯಾಗಿದ್ದಲ್ಲಿ ಓಂಬುಡ್ಸಮನ್ ಗಮನಕ್ಕೆ ತರಬಹುದು.

ಪ್ರಕರಣಗಳನ್ನು ಅಭಿಲೇಖಾಲಯ ಕಟ್ಟಡ, ಜಿಲ್ಲಾ ಪಂಚಾಯತ್ ಕಛೇರಿ ಆವರಣ ಕಾರವಾರ ವಿಳಾಸಕ್ಕೆ ಅಂಚೆ ಮೂಲಕ ಅಥವಾ [email protected] ಗೆ ಈಮೇಲ್ ಮೂಲಕ ಲಿಖಿತ ದೂರು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9481853117 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಒಂಬುಡ್ಸಮನ್ ಆರ್ ಜಿ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!