ರಂಜಾನ್ ಹಬ್ಬದಂದು ಲಾಕ್ಡೌನ್ ಸಡಿಲಿಸಲು ಜಿಲ್ಲಾಡಳಿತಕ್ಕೆ ಎಸ್.ಡಿ.ಪಿ.ಐ ಆಗ್ರಹ
ಮಂಗಳೂರು ಮೇ 11, 2021: ರಂಜಾನ್ ಹಬ್ಬದಂದು ಲಾಕ್ಡೌನ್ ಸಡಿಲಿಸಲು ಎಸ್.ಡಿ.ಪಿ.ಐ ಒತ್ತಾಯಿಸಿದೆ.
“ರಂಜಾನ್ ಹಬ್ಬದ ಸಾಂಪ್ರದಾಯಿಕ ಪದ್ದತಿಯಾದ ದಾನಧರ್ಮ, ಹಿರಿಯರ ಹಾಗೂ ಸಂಬಂಧಿಕರ ಭೇಟಿಯಂತಹ ಕಡ್ಡಾಯ ಕಾರ್ಯಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ದಿನದಂದು ಲಾಕ್ಡೌನ್ ಸ್ವಲ್ಪ ಮಟ್ಟಿಗೆ (ಸಂಜೆ 4 ಘಂಟೆಯ ತನಕ) ಸಡಿಲಿಸಿ ಮುಕ್ತವಾಗಿ ಸಂಚರಿಸಲು ಅವಕಾಶವನ್ನು ಮಾಡಿಕೊಡಬೇಕು,” ಎಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್ ಆಗ್ರಹಿಸಿದ್ದಾರೆ.
“ಮುಸ್ಲಿಂ ಸಮುದಾಯವು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸುವ ಪವಿತ್ರ ರಂಜಾನ್ ಮಾಸದ ವ್ರತವು ಒಂದೆರಡು ದಿನಗಳಲ್ಲಿ ಮುಗಿಯಲಿದೆ. ಇದೇ ಬರುವ 12 ಅಥವಾ 13 ನೇ ತಾರೀಕಿನಂದು ರಂಜಾನ್ ಹಬ್ಬವು ಬರಲಿದ್ದು ಅಂದು ಕೋವಿಡ್ ಮಾರ್ಗ ಸೂಚಿಯ ಪ್ರಕಾರ ಯಾವುದೇ ಮಸೀದಿ ಅಥವಾ ಈದ್ಗಾ ಗಳಲ್ಲಿ ಪ್ರಾರ್ಥನೆ ನಡೆಯುವುದಿಲ್ಲ ಈ ಬಗ್ಗೆ ಸರಕಾರದೊಂದಿಗೆ ಮುಸ್ಲಿಂ ಸಮುದಾಯ ಸಂಪೂರ್ಣ ಸಹಕಾರ ನೀಡುತ್ತದೆ. ಆದರೆ ಕೆಲವು ಸಾಂಪ್ರದಾಯಿಕ ಪದ್ದತಿ ಅನುಸರಿಸಲು ಲಾಕ್ಡೌನ್ ಸಡಿಲಿಸಬೇಕು ಎಂದು ಹೇಳಿದ್ದಾರೆ.