ಜಿಲ್ಲೆಗೆ 5 ಕೋಟಿ ಹಣ ಮಂಜೂರು: ಶಿವರಾಮ್ ಹೆಬ್ಬಾರ್

 ಜಿಲ್ಲೆಗೆ 5 ಕೋಟಿ  ಹಣ ಮಂಜೂರು: ಶಿವರಾಮ್ ಹೆಬ್ಬಾರ್
Share this post

ಕಾರವಾರ, ಏಪ್ರಿಲ್ 23, 2021: ಕೋವಿಡ್ ಸ್ಥಿತಿಗತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಗೆ 5 ಕೋಟಿ ಹಣ ಮಂಜೂರು ಮಾಡಲಾಗಿದ್ದು, ವೈದ್ಯಕೀಯ ಸೇವೆಗಳ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕೋವಿಡ್ ಎರೆಡನೆ ಅಲೆಯ ಬಗ್ಗೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು ಈಗಾಗಲೇ ಜಿಲ್ಲೆಯಲ್ಲಿ 2103 ಬೆಡ್‍ಗಳ ವ್ಯವಸ್ಥೆ ಮಾಡಿದೆ. 19 ಮಂದಿ ಆಕ್ಸಿಜನ್ ಚಿಕಿತ್ಸೆಗೆ ಒಳಗಾಗಿದ್ದು 55 ಮಂದಿ ಸಾಮಾನ್ಯ ಬೆಡ್ ಗಳಲ್ಲಿ ಚಿಕಿತ್ಸೆ ಮಾಡೆಯುತ್ತಿದ್ದು ಕೇವಲ 74 ಬೆಡ್ ಗಳು ಉಪಯೋಗವಾಗಿದ್ದು ವೈದ್ಯಕೀಯ ಸೇವೆಯಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಪಿ ಡಿ ಓ, ತಹಶೀಲ್ದಾರ್, ಎ ಸಿ ಒಳಗೊಂಡ 115 ಸೆಕ್ಟರ್ ತಂಡಗಳನ್ನ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರಿಗೋಸ್ಕರ ಬಳಸುವ ಆಂಬುಲೆನ್ಸ್ ಗಳಿಗೆ ಆಕ್ಸಿಜನ್ ಕಡ್ಡಾಯ ಮಾಡಲಾಗಿದ್ದು ಒಬ್ಬ ನರ್ಸ್ ಕೂಡ ನಿಯೋಜಿಸಲಾಗಿದೆ ಇದರಿಂದಾಗಿ ಸಕಾಲಕ್ಕೆ ಜನತೆಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬದ್ದವಾಗಿದೆ. ಜನತೆ ಕೋವಿಡ್ ಬಗ್ಗೆ ನಿರ್ಲಕ್ಷ ತೋರದೇ ಜಾಗರುಕರಾಗಿರಬೇಕು. ಲಾಕ್ ಡೌನ್ ಬಗ್ಗೆ ಕೂಡ ಭಯ ಪಡುವ ಅಗತ್ಯ ಇಲ್ಲಾ ಸರ್ಕಾರ ಜನತೆಯೊಂದಿಗೆದೆಯೆಂದು ಅವರು ಭರವಸೆ ನೀಡಿದರು.

ರಾಜ್ಯದ ಇತರ ಜಿಲ್ಲೆಗಳಿಗೆ ಹೊಲಿಸಿದಾಗ ಉತ್ತರ ಕನ್ನಡ ಪರಿಸ್ಥಿತಿಯು ಜಿಲ್ಲೆಯಲ್ಲಿ ಸಾಕಷ್ಟು ನಿಯಂತ್ರಣದಲ್ಲಿದೆ. ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವತ್ತ ಗಮನ ನೀಡಬೇಕು. ಕೋವಿಡ್ ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ಹೋದಾಗ ಅಂತಹ ಆಸ್ಪತ್ರೆಗಳು ಕೋವಿಡ್ ನೆಪದಲ್ಲಿ ಶೋಷಣೆ ಮಾಡದೇ ಮಾನವಿಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ವಾರದ ಸಂತೆ, ಜಾತ್ರೆ ಉತ್ಸವಗಳನ್ನ ರದ್ದು ಮಾಡಲಾಗಿದ್ದು, ಮದುವೆಗಳಿಗೆ 50 ಜನರು ಮಾತ್ರ ಸೇರಲು ಅವಕಾಶ ಕಲ್ಪಿಸಲಾಗಿದೆ. ಮದುವೆಯಾಗಿ ಹೊರ ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಹೋಗುವ ದಂಪತಿಗಳಿಗೆ ಕೊವಿಡ್ ನಿಯಂತ್ರಣ ನಿಯಮಗಳೊಂದಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಸರ್ಕಾರದ ಆದೇಶದಂತೆ ಇಲ್ಲಿಯವರೆಗೆ 45 ವರ್ಷದ ಮೇಲ್ಪಟ್ಟ 2 ಲಕ್ಷ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಜಿಲ್ಲೆಯಲ್ಲಿ ಈಗ 17 ಸಾವಿರ ವ್ಯಾಕ್ಸಿನ್ ದಾಸ್ತಾನು ಇದ್ದು ಇನ್ನೂ ಹೆಚ್ಚಿನ ಮಟ್ಟದ ದಾಸ್ತಾನು ತರಿಸಿಕೊಳ್ಳುವದರೊಂದಿಗೆ ಎಲ್ಲ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ವಹಿಸಲಾಗಿದೆ ಎಂದರು.

ಕಾರ್ಮಿಕರು ಕೂಡ ಯಾವುದೇ ರೀತಿ ಭಯ ಪಡಬೇಕಾಗಿಲ್ಲ. ಅವರು ಎಲ್ಲೆ ಹೋದರು ಕೂಡ ಕೋವಿಡ್ ಸನ್ನಿವೇಶ ಕಾಣಬೇಕಾಗುತ್ತದೆ. ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ಹೊದರೆ ಸಮಸ್ಯೆಯೇ ಉಧ್ಭವಿಸುತ್ತದೆ ವಿನಃ ಪರಿಹಾರ ಆಗುವದಿಲ್ಲ. ಆದ್ದರಿಂದ ಅವರು ಇದ್ದಲ್ಲಿಯೇ ಇದ್ದು ಸಹಕಾರ ನೀಡಬೇಕು . ಅವರಿಗಾಗಿಯೇ ಉಚಿತ ಸಹಾಯವಾಣಿ ಕೂಡ ಇರುತ್ತದೆ. ಕೊರೋನದ ಬಗ್ಗೆ ಭಯ ಪಡದೇ ಎಚ್ಚರಿಕೆಯಿಂಡಿರಬೇಕಾಗಿದೆ ಸರಕಾರ ಸದಾ ಕಾರ್ಮಿಕರೊಂದಿಗೆ ಇದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್, ಎಸಿ ವಿದ್ಯಾಶ್ರೀ ಚಂದರಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ನಾಯಕ್, ಕಿಮ್ಸ್ ನಿರ್ದೇಶಕ ಡಾ. ಗಜಾನನ್ ನಾಯಕ್, ಡಿಸ್ಟ್ರೀಕ್ಟ್ ಸರ್ಜನ್ ಡಾ. ಶಿವಾನಂದ ಕುಡ್ತಲ್‍ಕರ್ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!