ಚಿನ್ನ ಕಳ್ಳಸಾಗಾಣಿಕೆಗೆ ವಿಶೇಷ ವಿನ್ಯಾಸದ ಒಳ ಉಡುಪು!
ಮಂಗಳೂರು, ಮಾರ್ಚ್ 13, 2021: ಇಂದು ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಕೇರಳ ಮೂಲದ ಪ್ರಯಾಣಿಕರನ್ನು ತಡೆದು ಆತನ ಒಳ ಉಡುಪಲ್ಲಿ ಅಡಗಿಸಿಟ್ಟಿದ್ದ 33.75 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಕೊಪ್ಪ ಮೂಲದ 45 ವರ್ಷದ ಕೊಪ್ಪ ಮಮ್ಮಿನಿ ಖಾಲಿದ್ ಅನ್ನುವ ವ್ಯಕ್ತಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಆತ ವಿಶೇಷವಾಗಿ ವಿನ್ಯಾಸಗೊಳಿಸಿದ ತನ್ನಒಳ ಉಡುಪುಗಳಲ್ಲಿ ಚಿನ್ನವನ್ನು ಮರೆಮಾಚುವ ಮೂಲಕ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತನಿಂದ ₹ 33,75,470 ಲಕ್ಷ ಮೌಲ್ಯದ, 737 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕಾರ್ಯಾಚರಣೆಯ ನೇತೃತ್ವವನ್ನು ಉಪ ಆಯುಕ್ತ ಅವಿನಾಶ್ ಕಿರಣ್ ರೊಂಗಾಲಿ ವಹಿಸಿದ್ದರು. ಅಧೀಕ್ಷಕ ಶ್ರೇಣಿಯ ಅಧಿಕಾರಿಗಳಾದ ಭೋಮ್ಕರ್, ರಾಕೇಶ್ ಕುಮಾರ್ ಮತ್ತು ಬಿಕ್ರಮ್ ಚಕ್ರವರ್ತಿ ತಂಡದಲ್ಲಿ ಇದ್ದರು.