ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಪಂಚಶತಮಾನೋತ್ಸವ January 17, 2021 63 Share this post ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ, “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮವನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಪಲಿಮಾರು ಕಿರಿಯ ಶ್ರೀಪಾದರುಗಳು ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ ಎಸ್, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರರು ಮತ್ತು ಅರ್ಚಕರಾದ ವಾಸುದೇವ ಅಸ್ರಣ್ಣ ಉಪಸ್ಥಿತರಿದ್ದರು.ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ವಿ.ಹರಿನಾರಾಯಣ ಅಸ್ರಣ್ಣರು ಪ್ರಸ್ತಾವನೆಗೈದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಉಡುಪಿಯ ಆರ್.ಎಸ್.ಎಸ್ ನ ಜಿಲ್ಲಾ ಸಂಚಾಲಕರಾದ ನಾರಾಯಣ ಶೆಣೈ,ಗಿರಿಬಳಗ ಕುಂಜಾರುಗಿರಿ,ಕುಚ್ಚೂರಿನ ಶಾಂತಿನಿಕೇತನ ಯುವವೃಂದ,ಉಡುಪಿ ಜನರಲ್ ಕ್ರಾಫ್ಟರ್ಸ್ ನ ಗಣೇಶ್ ರಾವ್,ಗುಂಡಿಬೈಲು ಶ್ರೀಪತಿ ಭಟ್,ಹೆಬ್ರಿಯ ವಿವೇಕಾನಂದ ಯುವ ವೇದಿಕೆ,ಚಾರ,ಉಡುಪಿಯ ರಾಜಸ್ಥಾನ ಸಮಾಜ ಬಾಂಧವರ ಸಂಘ,ಬಜ್ಪೆ ರಾಘವೇಂದ್ರ ಆಚಾರ್ಯ,ಕುತ್ಯಾರು ಧೀರಜ್ ಎಸ್.ಶೆಟ್ಟಿ ಇವರುಗಳನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು. “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದಲ್ಲಿ,ಶ್ರೀಪಲಿಮಾರು ಮಠದ ಕುರಿತು ಉಪನ್ಯಾಸ ಗೋಷ್ಠಿಯ ಸಂದರ್ಭದಲ್ಲಿ,”ದಿನಕ್ಕೊಂದು ಭಾಗವತಾಮೃತ ಬಿಂದುಗಳು”,”ರಾಮ ಸಂದೇಶ “,”ಖಂಡಾರ್ಥ ನಿರ್ಣಯ” ಎಂಬ ಪುಸ್ತಕ ಗಳನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.ಸಂಗ್ರಹಕಾರರಾದ ಓಂಪ್ರಕಾಶ್ ಭಟ್ ರವರು ಪ್ರಸ್ತಾವನೆಗೈದರು. “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ ಪ್ರದರ್ಶನ ಮತ್ತು ಮಾರಾಟ ಹಾಗೂ ತುಳುನಾಡ ಪಾರಂಪರಿಕ ಪರಿಕರಗಳ ಪ್ರದರ್ಶನವನ್ನು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀವಿದ್ಯಾರಾಜೇಶ್ವರತೀರ್ಥ ಪಲಿಮಾರು ಕಿರಿಯ ಶ್ರೀಪಾದರುಗಳು ವೀಕ್ಷಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠ್ಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ತುಳು ಸಂಸ್ಕೃತಿ ಸಂಭ್ರಮ ನಡೆಯಿತು. “ಪರ್ಯಾಯಪಂಚಶತಮಾನೋತ್ಸವ”ದ ಕಾರ್ಯಕ್ರಮದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ,ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಚೇರಿಯ ಮಹಾಪ್ರಬಂಧಕರಾದ ಯೋಗೀಶ್ ಆಚಾರ್ಯ ಇವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆ ಜೋಗಿ ಸಮಾಜ,ದ.ಕ ಮೊಗವೀರ ಮಹಾಜನ ಸಂಘ (ರಿ)ಉಚ್ಚಿಲ,ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನೆ,ನವಚೈತನ್ಯ ಯುವಕ ಮಂಡಲ,ಶೀಂಬ್ರ,ಮಲ್ಪೆ ಮೀನುಗಾರರ ಸಂಘ,ನಿವೃತ್ತ ಸರಕಾರಿ ಅಧಿಕಾರಿ ಶಾಂತರಾಜ್ ರಾವ್,ಬ್ರಹ್ಮಾವರದ ಪಶುನಾಟಿ ವೈದ್ಯರಾದ ಗೋವಿಂದ ಪೂಜಾರಿ ಇವರುಗಳನ್ನು ಪರ್ಯಾಯ ಶ್ರೀಪಾದರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ,ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.ವಿ.ವಿಜಯಸಿಂಹ ಆಚಾರ್ಯ ಮತ್ತು ಐ.ಲಕ್ಷ್ಮೀನಾರಾಯಣ ಮುಚ್ಚಿಂತಾಯ, ಗೋವಿಂದ್ರಾಜ್ ಶ್ರೀಅದಮಾರು ಮಠದ ಕುರಿತು ಉಪನ್ಯಾಸ ಗೋಷ್ಠಿಯನ್ನು ನಡೆಸಿದರು. Please leave this field empty Subscribe to our newsletter! Email Address *