ಸಹಾಯಧನ : ಅರ್ಜಿ ಆಹ್ವಾನ

 ಸಹಾಯಧನ : ಅರ್ಜಿ ಆಹ್ವಾನ
Share this post

ಉಡುಪಿ, ಜನವರಿ 21, 2024: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ 20 ವರ್ಷಗಳ ಹಳೆಯ ಮೀನುಗಾರಿಕಾ ದೋಣಿಗಳ ಸೀಮೆಎಣ್ಣೆ ಇಂಜಿನ್ ಅನ್ನು ನಿಷ್ಕ್ರಿಯಗೊಳಿಸಿ, ಹೊಸ ಪೆಟ್ರೋಲ್ ಇಂಜಿನ್ ಅನ್ನು ಖರೀದಿಸಿ ಅಳವಡಿಸಿಕೊಂಡವರಿಗೆ ರೂ. 50,000 ಸಹಾಯಧನ ವಿತರಿಸುವ ಯೋಜನೆ ಜಾರಿಗೊಳಿಸಲಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 2,000 ಮೋಟಾರೀಕೃತ ನಾಡದೋಣಿಗಳಿಗೆ ಪೆಟ್ರೋಲ್ ಇಂಜಿನ್ ಅಳವಡಿಸಲು ಗುರಿ ನೀಡಲಾಗಿದ್ದು, ಇದರಲ್ಲಿ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕಿಗೆ ಒಟ್ಟು 900 ಮತ್ತು ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಒಟ್ಟು 1100 ಗುರಿಗಳನ್ನು ಮರುಹಂಚಿಕೆ ಮಾಡಲಾಗಿರುತ್ತದೆ.

ಅರ್ಹ ಮೀನುಗಾರರು ಸಂಬಂಧಪಟ್ಟ ಮೀನುಗಾರಿಕಾ ಸಹಾಯಕ ನಿರ್ದೇಶಕರು, ಉಡುಪಿ ಮೊ.ನಂ. 8971368219 ಮತ್ತು ಕುಂದಾಪುರ ಮೊ.ನಂ: 9731547998 ಕಛೇರಿಯನ್ನು ಸಂಪರ್ಕಿಸಿ ಯೋಜನೆಯ ಮಾಹಿತಿಯನ್ನು ಪಡೆದು ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಸಂಬಂಧಪಟ್ಟ ಕಛೇರಿಗೆ ಸಲ್ಲಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!