ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ಆಯ್ಕೆಪಟ್ಟಿ ಪ್ರಕಟ
ಕಾರವಾರ, ಅ.30, 2023: ನವೆಂಬರ್ 1 ರಂದು ನಡೆಯುವ ಜಿಲ್ಲಾ ಕನ್ನಡ ರಾಜ್ಯೋತ್ಸವ ದಿನದಂದು , ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 17 ಮಂದಿ ಸಾಧಕರುಗಳಿಗೆ ಹಾಗೂ 9 ಮಂದಿ ಅಧಿಕಾರಿಗಳನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
- ಕ್ರೀಡಾ ಕ್ಷೇತ್ರ: ಹೊನ್ನಾವರದ ರಾಜೇಶ.ಕೆ.ಮಡಿವಾಳ
- ಸಂಗೀತ: ಹೊನ್ನಾವರದ ಗಜಾನನ ಸುಬ್ರಾಯ ಭಂಡಾರಿ
- ಕೃಷಿ: ಶಿರಸಿಯ ಅಬ್ದುಲ್ ಕರೀಮ ಮಹ್ಮದ ಅಲಿ ಹಾಗೂ ಕುಮಟಾದ ಚಿದಾನಂದ ಗಣಪತಿ ಹೆಗಡೆ
- ಸಾಹಿತ್ಯ: ಹಳಿಯಾಳದ ಸಂತೋಷ ಕುಮಾರ ಮಹೆಂದಳೆ
- ಸಮಾಜಸೇವೆ: ಕುಮಟಾದ ದಿವಾಕರ ನಾಗೇಶ ನಾಯ್ಕ, ಕಾರವಾರದ ಎಸ್.ವಿ.ನಾಯ್ಕ ರಾಣೆ, ಇಬ್ರಾಹಿಂ ಕಲ್ಲೂರ, ಹಾಗೂ ಯಮುನಾ ಗಾಂವ್ಕರ
- ಶಿಲ್ಪಕಲೆ: ಕುಮಟಾದ ಶಿವಮೂರ್ತಿ.ಎಸ್.ಭಟ್ ಹಾಗೂ ಭಟ್ಕಳದ ಲಕ್ಷö್ಮಣ ಮಂಜುನಾಥ ನಾಯ್ಕ
- ಜಾನಪದ: ಭಟ್ಕಳದ ಕಾಳಿ ಸಂಕಯ್ಯ ಗೊಂಡ
- ಪತ್ರಿಕೋದ್ಯಮ: ಕುಮಟಾದ ಎಂ.ಜಿ.ನಾಯ್ಕ
- ಯಕ್ಷಗಾನ: ಕುಮಟಾದ ಬೋಮ್ಮಯ್ಯ.ವಿ.ಗಾಂವಕರ
- ನಾಟಕ,ಸಂಗೀತ: ಭಟ್ಕಳದ ರಾಜಾರಾಮ ಸುರೇಶ ಪ್ರಭು
- ಕಲೆ: ಅಂಕೋಲಾದ ಶಿವಾನಂದ ಸಾತು ನಾಯ್ಕ
- ಶಿಕ್ಷಣ: ಯಲ್ಲಾಪುರದ ಬೀರಣ್ಣ ನಾಯ್ಕ ಮೊಗಟಾ
ಅಧಿಕಾರಿಗಳಲ್ಲಿ, ದೇವರಾಜ ಸಹಾಯಕ ಆಯುಕ್ತರು, ಶಿರಸಿ, ನಿಚಲ್ ನೋರೊನ್ಹಾ ತಹಶೀಲ್ದಾರ ಕಾರವಾರ, ಸವಿತಾ ಕಾಮತ ತಾಲ್ಲೂಕು ಆರೋಗ್ಯಾಧಿಕಾರಿ ಭಟ್ಕಳ, ಹಳಿಯಾಳ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಬಿ.ಕೆ. ಸಂತೋಷ ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಕಾರವಾರ, ಹೊನ್ನಪ್ಪ ಗೌಡ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಕಾರವಾರ, ಪ್ರಕಾಶ ಶಿರಾಲಿ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಪ್ರೌಢಶಾಲೆ,ಬೆಳಕೆ ಭಟ್ಕಳ, ಸವಿತಾ ಎಮ್. ನಾಯ್ಕ ಶಾಖಾಧೀಕ್ಷಕರು ಜಿಲ್ಲಾ ಪೊಲೀಸ್ ಇಲಾಖೆ, ಆನಂದ ಬಡಕುಂದ್ರಿ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ, ಜೋಯಡಾ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಪ್ರಶಸ್ತಿ ಆಯ್ಕೆ ಸಮಿತಿ, ಉತ್ತರ ಕನ್ನಡಜಿಲ್ಲೆ ,ಕಾರವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.