ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ : ಸ್ಥಳ ಆಯ್ಕೆ ಕೌನ್ಸೆಲಿಂಗ ಪ್ರಕ್ರಿಯೆ

 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ : ಸ್ಥಳ ಆಯ್ಕೆ ಕೌನ್ಸೆಲಿಂಗ ಪ್ರಕ್ರಿಯೆ
Share this post

ಕಾರವಾರ.ಅ.19, 2023 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಕುರಿತು ಸ್ಥಳ ಆಯ್ಕೆ ಕೌನ್ಸೆಲಿಂಗ ಪ್ರಕ್ರಿಯೆಯನ್ನು ಅ.21 ರಂದು ಬೆಳಗ್ಗೆ 10 ಗಂಟೆಯಿಂದ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಸಹ್ಯಾದ್ರಿ ಕಾಲೋನಿ ಶಿರಸಿಯಲ್ಲಿ ನಡೆಸಲಾಗುತ್ತದೆ.

 ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವ ಕೌನ್ಸೆಲಿಂಗ್ ಗೆ ಅರ್ಹರಾಗಿರುವ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಭಾವ ಚಿತ್ರವಿರುವ ಗುರುತಿನ ಚೀಟಿ ಹಾಗೂ ಅಗತ್ಯ ಮೂಲ ದಾಖಲೆಗಳೊಂದಿಗೆ (ಈಗಾಗಲೇ ಕಚೇರಿಗೆ ಮೂಲ ದಾಖಲೆ ನೀಡಿದ್ದಲ್ಲಿ ಅದರ ಬಗ್ಗೆ ದಾಖಲೆಗಳೊಂದಿಗೆ) ಸಕಾಲದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು.

ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರು(ಆಡಳಿತ),ಶಾಲಾ ಶಿಕ್ಷಣ ಇಲಾಖೆ ರವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಶಿರಸಿಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!