ವಿಕಲಚೇತನರ ವಿವಿಧ ಸಮಸ್ಯೆಗಳಿಗೆ ತಜ್ಞರಿಂದ ಸೂಕ್ತ ಪರಿಹಾರ

 ವಿಕಲಚೇತನರ ವಿವಿಧ ಸಮಸ್ಯೆಗಳಿಗೆ ತಜ್ಞರಿಂದ ಸೂಕ್ತ ಪರಿಹಾರ
Share this post

ಉಡುಪಿ, ಮೇ 26, 2023: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಕಲಚೇತನರಿಗೆ ವಾರದಲ್ಲಿ 2 ದಿನ (ಸೋಮವಾರ ಹಾಗೂ ಗುರುವಾರ) ಉಚಿತ ಫಿಸಿಯೋಥೆರಫಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಆಡಿಯೋಲಜಿಸ್ಟ್/  ಸ್ಪೀಚ್ ಥೆರಫಿಸ್ಟ್ ತಜ್ಞರಿಂದ ದೈಹಿಕ ನ್ಯೂನ್ಯತೆ, ಬುದ್ಧಿ ಮಾಂದ್ಯತೆ, ಮಾನಸಿಕ ಅಸ್ವಸ್ಥತೆ, ಕಲಿಕಾ ನ್ಯೂನ್ಯತೆ, ಆಟಿಸಂ, ವಿಕಲಚೇತನರ ಪೋಷಕರಿಗೆ ಆಪ್ತ ಸಮಾಲೋಚನೆ, ವಾಕ್ ಮತ್ತು ಶ್ರವಣ ನ್ಯೂನ್ಯತೆ ಹಾಗೂ ದೃಷ್ಠಿದೋಷಕ್ಕೆ ಸಂಬಂಧಿಸಿದ ತರಬೇತಿಯನ್ನು ತಜ್ಞರಿಂದ ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ನೀಡಲಾಗುವುದು.

ಅಂಧತ್ವ ಮತ್ತು ಮಂದದೃಷ್ಠಿಯುಳ್ಳ ಮಕ್ಕಳಿಗೆ ಬ್ರೈಲ್ ತರಬೇತಿ, ಸ್ಥಳ ಪರಿಜ್ಞಾನ ಹಾಗೂ ಚಲನವಲನ ತರಬೇತಿ, ಅಂಗವಿಕಲತೆಗೆ ಅಗತ್ಯವಿರುವ ಕೃತಕಾಂಗ ಜೋಡಣೆ ಮತ್ತು ಸಾಧನ ಸಲಕರಣೆಗಳ ಗುರುತಿಸುವಿಕೆ, ತಯಾರಿ, ವಿತರಣೆ, ನಿರ್ವಹಣೆ ದುರಸ್ಥಿಯನ್ನು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕೃತಕ ಆವಯವ ತಯಾರಿಕಾ ಕೇಂದ್ರದಲ್ಲಿ ಅನುಷ್ಠಾನ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ: 0820-2533372 ಹಾಗೂ 2532222 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಡಿ.ಡಿ.ಆರ್.ಸಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!