ಮಹಿಳಾ ದಿನಾಚರಣೆ ಅಂಗವಾಗಿ ಯುವತಿಯರಿಗೆ ವಿವಿಧ ಸ್ಪರ್ಧೆ

 ಮಹಿಳಾ ದಿನಾಚರಣೆ ಅಂಗವಾಗಿ ಯುವತಿಯರಿಗೆ ವಿವಿಧ ಸ್ಪರ್ಧೆ
Share this post

ಉಡುಪಿ, ಮಾರ್ಚ್ 02, 2023: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ     ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲೆಯ 20 ವರ್ಷದೊಳಗಿನ ಮಹಿಳಾ ಸಂಘ, ಯುವತಿ ಸಂಘದ ಸದಸ್ಯರು ಹಾಗೂ ಕಾಲೇಜು ಯುವತಿಯರಿಗಾಗಿ ಮಾರ್ಚ್ 5 ರಂದು ನೇಜಾರು ಕ್ರೀಡಾಂಗಣದಲ್ಲಿ ಕ್ರಿಕೆಟ್ ಕ್ರೀಡಾಕೂಟ ಹಾಗೂ ಮಾ. 6 ರಂದು ಅಜ್ಜರಕಾಡು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಮತ್ತು ಈಜು ಸ್ಪರ್ಧೆಗಳನ್ನು ನಡೆಸಲಾಗುವುದು.

ವಿಜೇತ ತಂಡಗಳಿಗೆ ಮಾ. 8 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಆಸಕ್ತ ಜಿಲ್ಲೆಯ ಮಹಿಳಾ ಸಂಘ, ಯುವತಿ ಸಂಘ ಹಾಗೂ ಕಾಲೇಜು ಯುವತಿಯರು ಮಾ. 4 ರ ಒಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂ. ಸಂಖ್ಯೆ: 0820-2521324, 9845432303 ಅನ್ನು ಸಂಪರ್ಕಿಸಿ, ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!