ಸಮಾಜ ಕಲ್ಯಾಣ ಇಲಾಖೆ ಸಚಿವರ ಉಡುಪಿ ಜಿಲ್ಲಾ ಪ್ರವಾಸ
ಉಡುಪಿ, ಫೆ 24, 2023: ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಫೆಬ್ರವರಿ 25 ಹಾಗೂ 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ. 25 ರಂದು ಬೆಳಗ್ಗೆ 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ, ಬೆ. 10.30 ರಿಂದ ಮ. 12 ರ ವರೆಗೆ ಉಡುಪಿಯ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಸಹವಾಲು ಸ್ವೀಕಾರ ಕಾರ್ಯಕ್ರಮ, ಸಂಜೆ 6 ಕ್ಕೆ ಬ್ರಹ್ಮಾವರದಲ್ಲಿ ಚೇರ್ಕಾಡಿ ಕನ್ನಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಕೋಟದಲ್ಲಿ ವಾಸ್ತವ್ಯ ಮಾಡಲಿರುವರು.
ಫೆ. 27 ರಂದು ಬೆಳಗ್ಗೆ 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ, 10.30 ಕ್ಕೆ ಉಡುಪಿಯ ಕಿದಿಯೂರು ಹೋಟೆಲ್ನ ಮಾಧವ ಕೃಷ್ಣ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಗಮದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಪೌರ ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.