ಕೃಷಿ ವಿದ್ಯಾಲಯ: ಅರ್ಜಿ ಆಹ್ವಾನ

 ಕೃಷಿ ವಿದ್ಯಾಲಯ: ಅರ್ಜಿ ಆಹ್ವಾನ
Share this post

ಕಾರವಾರ. ಜನವರಿ 09, 2023: ಕೃಷಿ ವಿದ್ಯಾಲಯ, ಧಾರವಾಡದ ಅರಣ್ಯ ಮಹಾವಿದ್ಯಾಲಯ ಶಿರಸಿಯ ಮೂರು ವಿಭಾಗಗಳಿಗೆ ಅಸಿಸ್ಟೆಂಟ್ ಪ್ರೊಫೆಸರ್ ನ್ಯಾಚುರಲ್ ರಿಸೋರ್ಸ್ ಮ್ಯಾನೇಜ್ಮೆಂಟ್ ವಿಭಾಗಕ್ಕೆ-2, ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಪ್ರಾಡಕ್ಷನ್ ಅಂಡ್ ಯುಟಿಲೈಜೇಷನ್ ವಿಭಾಗಕ್ಕೆ-1 ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಫಾರೆಸ್ಟ್ ಬೈಲಜಿ ಅಂಡ್ ಟ್ರೀ ಇಂಪ್ರೂವ್ಮೆಂಟ್ ವಿಭಾಗಕ್ಕೆ-1 ಒಟ್ಟು ನಾಲ್ಕು ಸಹಾಯಕ ಪ್ರಾಧ್ಯಪಕ ಹುದ್ದೆಗಳನ್ನು ತಾತ್ಕಾಲಿಕ(179 ದಿನಗಳು) ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯಾರ್ಥಿಗಳು ತಮ್ಮ ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಜ.20 ರಂದು ಬೆಳಿಗ್ಗೆ 11.00
ಗಂಟೆಗೆ ಅರಣ್ಯ ಮಹಾವಿದ್ಯಾಲಯ, ಶಿರಸಿ ರವರ ಕಾರ್ಯಲಯದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲದಾಖಲೆಗಳನ್ನು ಹಾಗೂ ಅವುಗಳ ಎರಡು ಧೃಡಿಕೃತ ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ಸೂಚಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08384-226146 ಗೆ ಸಂಪರ್ಕಿಸಿ ಎಂದು ಅರಣ್ಯ ಎಂದು ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!