ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ: ಅರ್ಜಿ ಆಹ್ವಾನ

 ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ: ಅರ್ಜಿ ಆಹ್ವಾನ
Share this post

ಮಂಗಳೂರು,ಡಿ.05, 2022: ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಫಜೀರು ಹಾಗೂ ಸಜೀಪನಡು ಗ್ರಾಮ ಪಂಚಾಯತ್‍ಗಳಲ್ಲಿ ಖಾಲಿ ಇರುವ ವಿಕಲಚೇತನರ (ಅಂಗವಿಕಲ) ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಮಾಸಿಕ 9,000 ರೂ.ಗಳ ಗೌರವಧನದೊಂದಿಗೆ ಅರ್ಜಿ ಆಹ್ವಾನಿಸಿದೆ.

ಎಸ್.ಎಸ್.ಎಲ್.ಸಿ. ಉತ್ತೀರ್ಣ ಅಥವಾ ಅನುತ್ತೀರ್ಣರಾದ 18-45 ವಯೋಮಿತಿಯ ವಿಕಲಚೇತನ (ಅಂಗವಿಕಲ)ರನ್ನು ಗ್ರಾಮ ಪಂಚಾಯತ್‍ಗೆ ಒಬ್ಬರಂತೆ ಆಯ್ಕೆ ಮಾಡಲಾಗುವುದು.

ಅರ್ಹರು ಇದೇ ಡಿ.31ರೊಳಗೆ ಬಂಟ್ವಾಳ ತಾಲೂಕಿನ, ಕೈಕುಂಜೆ ಗ್ರಾಮ ಪಂಚಾಯತ್ ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!