ಯಕ್ಷರಂಗಾಯಣ: ಅರ್ಜಿ ಆಹ್ವಾನ

 ಯಕ್ಷರಂಗಾಯಣ: ಅರ್ಜಿ ಆಹ್ವಾನ
Share this post

ಮಂಗಳೂರು,ಅ.21, 2022: ಕಾರ್ಕಳ ಯಕ್ಷರಂಗಾಯಣವು ಹೊಸದಾಗಿ ಆರಂಭಿಸುವ ಅಲ್ಪಾವಧಿಯ 3 ತಿಂಗಳು ಸಂಚಾರಿ ರಂಗತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವಿರುವ, ತಾಳ-ಲಯ-ಸಂಗೀತ- ಕುಣಿತದ ಕನಿಷ್ಠ ಜ್ಞಾನವಿರುವ, ಕನ್ನಡವನ್ನು ಸ್ಪಷ್ಟವಾಗಿ ಓದಲು- ಉಚ್ಚರಿಸಲು ಬರುವ 18 ರಿಂದ 30 ವರ್ಷದೊಳಗಿನ ಕಲಾವಿದರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಸರ್ಕಾರದ ನಿಯಾಮಾನುಸಾರ ಮಾಸಿಕ ವೇತನ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಸಂಪೂರ್ಣ ಸ್ವ-ವಿವರಗಳನ್ನು ಅ.25ರೊಳಗೆ ವಿಶೇಷ ಕರ್ತವ್ಯಾಧಿಕಾರಿ, ಯಕ್ಷರಂಗಾಯಣ, ಕೋಟೆ ಚೆನ್ನಯ ಥೀಂ ಪಾರ್ಕ್, ಕಾರ್ಕಳ, ಉಡುಪಿ ಜಿಲ್ಲೆ-574104 ಈ ವಿಳಾಸಕ್ಕೆ ಕಳುಹಿಸಬೇಕು.

ಸಂದರ್ಶನದ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ಯಕ್ಷರಂಗಾಯಣದ ನಿರ್ದೇಶಕರಾದ ಜೀವನ್ ರಾಂ.ಸುಳ್ಯ ಮತ್ತು ವಿಶೇಷ ಕರ್ತವ್ಯಾಧಿಕಾರಿಗಳಾದ ಪೂರ್ಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!