ಲೋಕಾಯುಕ್ತ: ಸೆ.19 ರಿಂದ ಅಹವಾಲು ಸ್ವೀಕಾರ

 ಲೋಕಾಯುಕ್ತ: ಸೆ.19 ರಿಂದ ಅಹವಾಲು ಸ್ವೀಕಾರ
Share this post

ಮಂಗಳೂರು,ಸೆ.16, 2022: ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಸೆ.19ರ ಸೋಮವಾರ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸುಳ್ಯ ತಾಲೂಕಿನ ತಹಶೀಲ್ದಾರರ ಕಚೇರಿ, ಸೆ.20ರ ಮಂಗಳವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮೂಲ್ಕಿ ತಾಲೂಕಿನ ನಗರ ಪಂಚಾಯತ್ ಸಮುದಾಯ ಭವನ ಹಾಗೂ ಸೆ.21ರ ಬುಧವಾರ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಬೆಳ್ತಂಗಡಿ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.

 ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಮತ್ತು ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧದ ದೂರುಗಳನ್ನು ನೀಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಪೊಲೀಸ್ ಅಧೀಕ್ಷಕರ ಕಚೇರಿ:0824-2950997, 9886542369. ಪೊಲೀಸ್ ಉಪಾಧಿಕ್ಷಕರ ಕಚೇರಿ-1:0824-2453420, 9448635348. ಪೊಲೀಸ್ ಉಪಾಧೀಕ್ಷಕರ ಕಚೇರಿ-2:0824-2453420. ಪೊಲೀಸ್ ನಿರೀಕ್ಷಕರ ಕಚೇರಿ:0824-2427237 ಈ ದೂ.ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!