ಮೂಡಬಿದ್ರೆ: ಜುಲೈ 30 ರಂದು ವಿದ್ಯುತ್ ವ್ಯತ್ಯಯ
ಮಂಗಳೂರು,ಜು.29, 2022: ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.
ಆದ ಕಾರಣ ಜು.30ರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರಗದ್ದೆ, ಪೆಲಕುಂಜ, ಶಾಂತಿನಗರ, ಮೂಡಾಯಿಕಾಡು, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಬಸವನಕಜೆ, ಅಮನೊಟ್ಟು, ಆನೆಗುಡ್ಡೆ, ಜೋಗೊಟ್ಟು, ವಾಲ್ಪಾಡಿ, ಶಿರ್ತಾಡಿ, ಮಕ್ಕಿ, ಶಿಮುಂಜೆ, ಅಳಿಯೂರು, ಬೋರುಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.