ಜುಲೈ 14 ರಂದು ವಿದ್ಯುತ್ ವ್ಯತ್ಯಯ
ಮಂಗಳೂರು,ಜು.13, 2022: 220ಕೆ.ವಿ ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಯೆಯ್ಯಾಡಿ, ಹರಿಪದವು ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ (ಜಿ.ಓ.ಎಸ್ ರಿಪೇರಿ, ಟ್ರಿಕಟ್ಟಿಂಗ್) ಕೈಗೊಳ್ಳಲಾಗಿದೆ.
ಆದ ಕಾರಣ ಜು.14ರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30ರ ವರೆಗೆ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ, ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ತಡಂಬೈಲ್:
11ಕೆ.ವಿ ತಡಂಬೈಲ್ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಆ ಪ್ರಯುಕ್ತ ಜು.14ರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಎನ್.ಐ.ಟಿ.ಕೆ, ಪಡ್ರೆ, ಮುಕ್ಕ, ಶ್ರೀನಿವಾಸನಗರ, ಸಸಿಹಿತ್ಲು, ದಾಂಡಿ, ಮೂಡುಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.