ಆ.17 ರಿಂದ ಸ್ನಾತಕ ತರಗತಿ ಪ್ರಾರಂಭ

 ಆ.17 ರಿಂದ ಸ್ನಾತಕ ತರಗತಿ ಪ್ರಾರಂಭ
Share this post

ಮಂಗಳೂರು,ಜು.12, 2022: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಎಲ್ಲಾ ಸಂಯೋಜಿತ/ ಘಟಕ/ ಸ್ವಾಯತ್ತ ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷ 2022-23ನೇ ಸಾಲಿನ ಸ್ನಾತಕ ಕಾರ್ಯಕ್ರಮಗಳ ಪ್ರಥಮ ಸೆಮಿಸ್ಟರ್ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭಗೊಂಡಿದೆ.

ಪ್ರವೇಶ ದಂಡ ಶುಲ್ಕ ರಹಿತವಾಗಿ 2022ರ ಆಗಸ್ಟ್ 6ರಂದು ಹಾಗೂ ದಂಡ ಶುಲ್ಕ ಸಹಿತವಾಗಿ ಆಗಸ್ಟ್ 16ರಂದು ಪಾವತಿಸಲು ಕೊನೆಯ ದಿನವಾಗಿದೆ. ಸರ್ಕಾರದ ಆದೇಶದಂತೆ ಆಗಸ್ಟ್ 17ರಿಂದ ಎಲ್ಲಾ ಸ್ನಾತಕ ಕಾರ್ಯಕ್ರಮಗಳ ಪ್ರಥಮ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!