ಕೆ.ಎಸ್.ಆರ್.ಟಿ.ಸಿ ಬಸ್‍ಪಾಸ್ ಅವಧಿ ವಿಸ್ತರಣೆ

 ಕೆ.ಎಸ್.ಆರ್.ಟಿ.ಸಿ ಬಸ್‍ಪಾಸ್ ಅವಧಿ ವಿಸ್ತರಣೆ
Share this post

ಮಂಗಳೂರು,ಜು.01, 2022: ಪದವಿ, ವೃತ್ತಿಪರ ಕೋರ್ಸ್, ಕಾನೂನು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 2021-22ರ ಸಾಲಿನ ಬಸ್‍ಪಾಸ್‍ ಅನ್ನು 2022ರ ಜೂನ್ ತಿಂಗಳವರೆಗೆ ವಿತರಿಸಲಾಗಿರುತ್ತದೆ.

ಆದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು, ತರಗತಿಗಳು ನಡೆಯುವ ಕಾರಣ ಬಸ್‍ಪಾಸ್‍ನ್ನು 2022ರ ಆಗಸ್ಟ್ ವರೆಗೆ ವಿಸ್ತರಿಸಲಾಗಿದ್ದು, ವಿದ್ಯಾರ್ಥಿಗಳು ಎರಡು ತಿಂಗಳ ನಿಗದಿತ ಶುಲ್ಕವನ್ನು ಪಾಸ್ ಕೌಂಟರ್‍ನಲ್ಲಿ ಪಾವತಿಸಿ ರಸೀದಿಯನ್ನು ಪಡೆದುಕೊಳ್ಳುಬೇಕು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ರಸೀದಿ ಹಾಗೂ ಹಳೆಯ ಬಸ್‍ಪಾಸ್ ಎರಡನ್ನು ತೋರಿಸಿ ಬಸ್ಸಿನಲ್ಲಿ ಪ್ರಯಾಣಿಸಬಹುದು ಎಂದು ಪುತ್ತೂರು ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!