ಸಾಲುಮರದ ತಿಮ್ಮಕ್ಕನಿಗೆ ಪರಿಸರ ರಾಯಭಾರಿ ಬಿರುದು: ಮುಖ್ಯಮಂತ್ರಿ ಬೊಮ್ಮಾಯಿ

 ಸಾಲುಮರದ ತಿಮ್ಮಕ್ಕನಿಗೆ ಪರಿಸರ ರಾಯಭಾರಿ ಬಿರುದು: ಮುಖ್ಯಮಂತ್ರಿ ಬೊಮ್ಮಾಯಿ
Share this post

ಬೆಂಗಳೂರು, ಜೂನ್ 30, 2022: ಸಾಲು ಮರದ ತಿಮ್ಮಕ್ಕನಿಗೆ ಪರಿಸರದ ರಾಯಭಾರಿ ಎಂಬ ವಿಶೇಷ ಬಿರುದು ನೀಡಿ ಆಕೆ ಬಯಸಿದಲ್ಲಿ ಹೋಗಿ ಪ್ರಚಾರ ಕೈಗೊಳ್ಳಲು ರಾಜ್ಯ ಸಚಿವರ ಸ್ಥಾನ ನೀಡಿ , ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿ ತುಮಕೂರು ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ಇವರ ವತಿಯಿಂದ ವಸಂತನಗರದ ಡಾ. ಅಂಬೇಡ್ಕರ್ ಭವನದಲ್ಲಿ ‌ಆಯೋಜಿಸಿರುವ ವೃಕ್ಷ ಮಾತೆ, ಪದ್ಮಶ್ರೀ ನಾಡೋಜ, ಡಾ. ಸಾಲು ಮರದ ತಿಮ್ಮಕ್ಕ ಅವರ 111ರ ಜನುಮ ಸಂಭ್ರಮ ಹಾಗೂ ನ್ಯಾಷನಲ್ ಗ್ರೀನರಿ ಅವಾರ್ಡ್-2020ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು .

ತಿಮ್ಮಕ್ಕ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.

ವೆಬ್ ಸೈಟ್ ಅಭಿವೃದ್ಧಿ

ತಿಮ್ಮಕ್ಕ ವೆಬ್ ಸೈಟ್ ಅಭಿವೃದ್ಧಿ ಪಡಿಸಿ ಭಾರತದ ತುಂಬಾ ಪ್ರಚುರಪಡಿಸಲು ವಾರ್ತಾ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಸಾಲುಮರದ ತಿಮ್ಮಕ್ಕ ಅಲ್ಲದೇ ಈ ರೀತಿಯ ಸೇವೆಗಳನ್ನು ಮಾಡಿರುವವರ ವೆಬ್ ಸೀರೀಸ್ ನ್ನು ವಾರ್ತಾ ಇಲಾಖೆ ನಿರ್ಮಿಸಲಿದೆ ಎಂದರು.

ತಿಮ್ಮಕ್ಕನ ಊರಿನ ಬಳಿ 10 ಎಕರೆ ಸ್ಥಳ ನಿಗದಿ ಮಾಡಿ ಆದೇಶವನ್ನು ಶೀಘ್ರವಾಗಿ ಹೊರಡಿಸಲಾಗುವುದು. ತಿಮ್ಮಕ್ಕ ಅವರಿಗೆ ಈಗಾಗಲೇ ಬಿಡಿಎ ನಿವೇಶನ ನೀಡಿ ನೋಂದಾಣಿಯನ್ನು ಮಾಡಿಕೊಡಲಾಗಿದೆ. ನಿವೇಶನವನ್ನು ಭದ್ರಪಡಿಸಲು ತಂತಿಬೇಲಿ ಹಾಕಬೇಕು. ಶೀಘ್ರವಾಗಿ ಮನೆಯನ್ನು ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಾಧನೆ ಮಾಡಲು ಪದವಿ, ನೆರವು ಅವಕಾಶಗಳು ಅಗತ್ಯ ವಿಲ್ಲ. ಒಂದು ಧ್ಯೇಯ ಇದ್ದಲ್ಲಿ ಕಾಯಕನಿಷ್ಠೆಯಿಂದ ಸರ್ವರಿಗೂ ಒಳ್ಳೆಯದಾಗುವ ಕೆಲಸ ಮಾಡಿದರೆ ಇಡೀ ಜಗತ್ತಿಗೆ ಬದಲಾವಣೆ ತರುವ ಪ್ರಭಾವಿ ಶಕ್ತಿಯಾಗಬಹುದು ಎನ್ನುವ ಉದಾಹರಣೆ ನಮ್ಮವರೇ ಆದ ಸಾಲು ಮರದ ತಿಮ್ಮಕ್ಕ ಎಂದರು.

ತಿಮ್ಮಕ್ಕ ಬಹು ದೊಡ್ಡ ಪ್ರೇರಣಾ ಶಕ್ತಿ
ಸಾಲು ಮರದ ತಿಮ್ಮಕ್ಕನ ಮುಖದಲ್ಲಿ ಮುಗ್ಧತೆ ಇದೆ. ಅವರ ಪ್ರಾಂಜಲ ಮನಸ್ಸು ಮತ್ತು ಶುದ್ಧ ಅಂತ:ಕಾರಣದಿಂದ ಮಾಡಿದ ಕಾಯಕಯೋಗದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಧನೆ ಕಡಿಮೆ ಸಾಧನೆಯಲ್ಲ. ಪ್ರಶಸ್ತಿ ಗಳು ತಿಮ್ಮಕ್ಕ ನನ್ನು ಹುಡುಕಿಕೊಂಡು ಬಂದಿವೆ. ಆಕೆಯ ಕತೃತ್ವ ಶಕ್ತಿ ಅಷ್ಟಿದೆ. ತಮ್ಮ ಊರಿನ ನಾಲ್ಕು ಕಿಮೀ ಉದ್ದಕ್ಕೂ ಸಸಿಗಳನ್ನು ನೆಟ್ಟು ಬೆಳೆಸಿರುವುದು ಅಸಾಮಾನ್ಯ. ಸಾಲು ಮರದ ತಿಮ್ಮಕ್ಕ ಪ್ರಸಿದ್ದರಾದ ನಂತರ ಬಹಳ ಜನರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿ ಶಾಲೆ ಹಾಗೂ ಊರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅದ್ಭುತವಾಗಿದೆ. ಆಕೆ ಅಷ್ಟು ದೊಡ್ಡ ಪ್ರೇರಣಾ ಶಕ್ತಿ ಎಂದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!