ಜೂ. 22 ರಂದು ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಮೇಳ

 ಜೂ. 22 ರಂದು ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ಮೇಳ
Share this post

ಕಾರವಾರ ಜೂ.19, 2022: ಯೋಜನಾ ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಬೆಂಗಳೂರಿನ ಟಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಜೂ. 22 ರಂದು ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ 1 ವರ್ಷದ ಅಪ್ರೆಂಟಿಸ್ ಗಾಗಿ ಅಪ್ರೆಂಟಿಸ್ ಮೇಳ ಆಯೋಜಿಸಲಾಗಿದೆ.

ಆಸಕ್ತ 18ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಫಿಟ್ಟರ್, ಎಲೆಕ್ಟ್ರಿಷಿಯನ್, ಟರ್ನರ್, ಮೋಟಾರ್ ಮೆಕ್ಯಾನಿಕ್ ವೆಹಿಕಲ್, ಡಿಸೈಲ್ ಮೆಕ್ಯಾನಿಕ್, ವೆಲ್ಡರ್ ಟ್ರೇಡ್‍ಗಳಲ್ಲಿ ಶೇ. 50 ಅಂಕಗಳೊಂದಿಗೆ ಉತ್ತೀರ್ಣರಾದವರು ತಮ್ಮ ರೆಸ್ಯೂಮ್, ಆಧಾರ ಕಾರ್ಡ್, ಭಾವಚಿತ್ರದ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಜೂ. 22ರಂದು ಬಾಡದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಮ್ಮಿಕೊಂಡಿರುವ ಮೇಳದಲ್ಲಿ ಭಾಗವಹಿಸಬಹುದಾಗಿದೆ.

10 ಮತ್ತು 12 ನೇ ತರಗತಿ ಪಾಸಾದವರಿಗಾಗಿ 2 ವರ್ಷದ ಆಟೊಮೊಬೈಲ್ ಅಸೆಂಬ್ಲಿ, ಆಟೊಮೊಬೈಲ್ ಪೇಂಟ್ಸ್ ಹಾಗೂ ಆಟೊಮೊಬೈಲ್ ವೆಲ್ಡ್ ಕೋರ್ಸ ಪಡೆಯಲು ಅವಕಾಶವಿದ್ದು ಆಸಕ್ತರು ತಮ್ಮ ವಿದ್ಯಾರ್ಹತೆ ದಾಖಲೆಗಳೊಂದಿಗೆ ಬಾಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08382-226386, 8310044796, 9743360656 ಗೆ ಸಂಪರ್ಕಿಸಬಹುದಾಗಿದೆ ಎಂದು ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!