ಪಿಲಿಕುಳ ವಿಜ್ಞಾನ ಕೇಂದ್ರ: ಮೇ 01 ರಂದು ಗ್ರಹಗಳ ವೀಕ್ಷಣೆ
ಮಂಗಳೂರು,ಏ.30, 2022: ಖಗೋಳಾಸಕ್ತರಿಗೆ ಆಕಾಶದಲ್ಲಿ ಗ್ರಹಗಳ ‘ಲೈನ್ಅಪ್’ ನೋಡುವ ಅಪೂರ್ವ ಅವಕಾಶ.
ಮೇ.01ರಂದು ಗುರು, ಶುಕ್ರ, ಮಂಗಳ ಮತ್ತು ಶನಿ ಗ್ರಹಗಳಾದ ಬಹು ಹತ್ತಿರದಲ್ಲಿರುವುದು ಕಾಣಬಹುದು.
ಗುರು, ಶುಕ್ರ, ಮಂಗಳ ಮತ್ತು ಶನಿ ಒಟ್ಟಿಗಿರುವುದನ್ನು ಕಾಣಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ದೂರದರ್ಶಕದ ಮೂಲಕ ಅಂದು ಮುಂಜಾನೆ 4.30 ರಿಂದ ಆಸಕ್ತ ವೀಕ್ಷಕರು ಮಾಸ್ಕ್ ಧರಿಸಿ ಕೇಂದ್ರಕ್ಕೆ ಬಂದು ಈ ಅಪರೂಪದ ದೃಶ್ಯವನ್ನು (ಶುಭ್ರ ಆಕಾಶವಿದ್ದಲ್ಲಿ ) ಕಾಣಲು ಅವಕಾಶ ಕಲ್ಪಿಸಲಾಗಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.