ಮಾರ್ಚ್ 30 ರಿಂದ ಮಂತ್ರಾಲಯಕ್ಕೆ ವೋಲ್ವೋ

 ಮಾರ್ಚ್ 30 ರಿಂದ ಮಂತ್ರಾಲಯಕ್ಕೆ ವೋಲ್ವೋ
Share this post

ಮಂಗಳೂರು, ಮಾ.25, 2022: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ಮಂಗಳೂರು-ಮಂತ್ರಾಲಯ-ಮಂಗಳೂರು ಮಾರ್ಗದಲ್ಲಿ ವೋಲ್ವೋ ಸಾರಿಗೆ ಪ್ರಾರಂಭಿಸಲಾಗುತ್ತಿದೆ.

ಸಾರ್ವಜನಿಕ ಪ್ರಯಾಣಿಕರ ಹಾಗೂ ಭಕ್ತಾಧಿಗಳ ಅನುಕೂಲಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ಮಂಗಳೂರು-ಮಂತ್ರಾಲಯ-ಮಂಗಳೂರು ವಯಾ ಉಡುಪಿ-ಕುಂದಾಪುರ-ಅಂಪಾರು-ಸಿದ್ದಾಪುರ-ತೀರ್ಥಹಳ್ಳಿ-ಶಿವಮೊಗ್ಗ-ಹೊನ್ನಾಳಿ-ಹರಿಹರ-ಹರಪನಹಳ್ಳಿ-ಹಗರಿಬೊಮ್ಮನಹಳ್ಳಿ- ಹೊಸಪೇಟೆ-ಕುಡುತಿನಿ-ಬಳ್ಳಾರಿ-ಆಲೂರು-ಅದೋನಿ  ಮಾರ್ಗದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿದ್ದ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಮೇಲ್ದರ್ಜೇಗೆ ಏರಿಸಿ ಪ್ರತಿಷ್ಠಿತ ವೋಲ್ವೋ ಸಾರಿಗೆಯನ್ನು 2022ರ ಮಾ. 30 ರಿಂದ ಪ್ರಾರಂಭಿಸಲಾಗುತ್ತಿದೆ.

ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು ಉಡುಪಿ 7.15-7.20, ಮಣಿಪಾಲ 7.30, ಕುಂದಾಪುರ 8.15, ಹೊಸಪೇಟೆ ಬೆಳಿಗ್ಗೆ 4.30-4.45, ಕುಡುತಿನಿ, ಬಳ್ಳಾರಿ 5.45-6.00,ಆಲೂರು, ಆದೋನಿ ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಿಗ್ಗೆ 7.45ಕ್ಕೆ ತಲುಪುವುದು ಹಾಗೂ ಮರು ಪ್ರಯಾಣವು ಮಂತ್ರಾಲಯದಿಂದ  ಸಂಜೆ 6.30 ಗಂಟೆಗೆ ಹೊರಟು ಅದೋನಿ, ಆಲೂರು, ಬಳ್ಳಾರಿ 2100-2115, ಕುಡುತಿನಿ, ಹೊಸಪೇಟೆ 2215, ಮಾರ್ಗವಾಗಿ ಮಂಗಳೂರು ಬೆಳಿಗ್ಗೆ 8.15ಕ್ಕೆ ತಲುಪುವುದು.

ಈ ಸಾರಿಗೆಯಲ್ಲಿ ಮಂಗಳೂರಿನಿಂದ ಮಂತ್ರಾಲಯಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 1,150 ರೂ.ಗಳು. ಉಡುಪಿ-ಮಂತ್ರಾಲಯಕ್ಕೆ ಒಟ್ಟು ಪ್ರಯಾಣ ದರ 1,100 ರೂ.ಗಳು ಹಾಗೂ ಕುಂದಾಪುರದಿಂದ-ಮಂತ್ರಾಲಯ ಒಟ್ಟು ಪ್ರಯಾಣದರ 1,050 ರೂ.ಗಳಾಗಿವೆ.

ಈ ಸಾರಿಗೆಗೆ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ. ಸಾರ್ವಜನಿಕರು https://ksrtc.in/oprs-web/ ಗೆ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್‍ಗೆ ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ-

  • ಮಂಗಳೂರು ಬಸ್ಸು ನಿಲ್ದಾಣ: 7760990720
  • ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್: 9663211553
  • ಉಡುಪಿ ಬಸ್ಸು ನಿಲ್ದಾಣ: 9663266400
  • ಕುಂದಾಪುರ ಬಸ್ಸು ನಿಲ್ದಾಣ: 9663266009
  • ಮಂತ್ರಾಲಯ ಬಸ್ಸು ನಿಲ್ದಾಣ: 08512279444
  • ಮಂಗಳೂರು-02ನೇ ಘಟಕ 7760990714/7760990728

ಸಾರ್ವಜನಿಕ ಪ್ರಯಾಣಿಕರು  ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!