ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧ

 ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧ
Share this post

ಕಾರವಾರ ಮಾ. 16, 2022: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಮಾ.17 ರಿಂದ ಆಚರಿಸುತ್ತಿದ್ದು. ಹಬ್ಬದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಈ ಕೆಳಕಂಡ ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಮಾ.17 ಬೆಳಿಗ್ಗೆ 6.00 ರಿಂದ ಮಾ. 18 ರಾತ್ರಿ 11.00 ವರೆಗೆ ಭಟ್ಕಳ, ಹೊನ್ನಾವರ, ಕುಮಟಾ, ಕಾರವಾರ, ಅಂಕೋಲಾ ತಾಲೂಕು, ಮಾ. 19 ರ ಬೆಳಿಗ್ಗೆ 6.00 ಗಂಟೆಯವರೆಗೆ ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕು, ಮಾ.19 ಬೆಳಿಗ್ಗೆ 6.00 ರಿಂದ ಮಾ.20 ರ ಬೆಳಿಗ್ಗೆ 6.00 ಗಂಟೆಯವರೆಗೆ ಯಲ್ಲಾಪುರ ತಾಲೂಕು, ಮಾ.22 ಬೆಳಿಗ್ಗೆ 6. ರಿಂದ ಮಾ.23 ಬೆಳಿಗ್ಗೆ 6. ಗಂಟೆಯವರೆಗೆ ಮುಂಡಗೋಡ ತಾಲೂಕು, ಮಾ.24 ಬೆಳಿಗ್ಗೆ 6. ರಿಂದ ಮಾ.25 ಬೆಳಿಗ್ಗೆ 6.00 ಗಂಟೆಯವರೆಗೆ ಮುಂಡಗೋಡ ತಾಲೂಕಿನ ಪಾಳಾ ಗ್ರಾಮದಲ್ಲಿ ಎಲ್ಲಾ ರೀತಿಯ ವೈನ್ ಶಪ್ ಮತ್ತು ಬಾರ್ ಬಂದ್ ಮಾಡುವಂತೆ ತಿಳಿಸಿರುತ್ತಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!