ಉಡುಪಿ ಕೇದಾರ ಕಜೆ ಗ್ರಾಹಕರಿಗೆ ಸ್ಥಳೀಯವಾಗಿ ಲಭಿಸುವ ಸಲುವಾಗಿ ರಘುಪತಿ ಭಟ್ ಸಭೆ
ಉಡುಪಿ, ಮಾ 07, 2022: ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಿ ಬೆಳೆದಿರುವ ಸಂಪೂರ್ಣ ಸಾವಯವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ” ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ರೈತರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಯಾವುದೇ ರಾಸಾಯನಿಕ ಬಳಸದ ಸಂಪೂರ್ಣ ಸಾವಯುವ ಕುಚ್ಚಲಕ್ಕಿ ಗ್ರಾಹಕರಿಗೆ ಸ್ಥಳೀಯವಾಗಿ ಲಭಿಸುವ ಸಲುವಾಗಿ ದಿನಾಂಕ ಮಾರ್ಚ್ 6 ರಂದು ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಕೇದಾರೋತ್ಥಾನ ಟ್ರಸ್ಟ್ ಸದಸ್ಯರೊಂದಿಗೆ ಸಭೆ ನಡೆಸಿದರು.
ಶಾಸಕರು ಟ್ರಸ್ಟ್ ನ ಸದಸ್ಯರಲ್ಲಿ “ಉಡುಪಿ ಕೇದಾರ ಕಜೆ”ಯನ್ನು ತಾವು ತಮ್ಮ ತಮ್ಮ ಮನೆಗಳಲ್ಲಿ ಊಟಕ್ಕೆ ಬಳಸುವಂತೆ ವಿನಂತಿಸಿದರು. ಜೊತೆಗೆ ತಮ್ಮ ಊರಿನಲ್ಲಿರುವ ಅಂಗಡಿ ಮಾಲಕರಿಗೆ “ಉಡುಪಿ ಕೇದಾರ ಕಜೆ”ಯ ಬಗ್ಗೆ ಮಾಹಿತಿ ನೀಡಿ ಅಕ್ಕಿಯ ಮಾರಾಟಕ್ಕೆ ಪ್ರೋತ್ಸಾಹಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಮತ್ತು ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.