ಮರಳು ವಿತರಣೆಗೆ ಕ್ರಮ
ಮಂಗಳೂರು,ಫೆ.25, 2022: ನಗರದ ಫಲ್ಗುಣಿ ನದಿ ಪಾತ್ರದ ಅದ್ಯಪಡಿ ಡ್ಯಾಂನ ಹಿನ್ನೀರಿನ ಪ್ರದೇಶದಲ್ಲಿ ಮತ್ತು ಬಂಟ್ವಾಳ ತಾಲೂಕು ನೇತ್ರಾವತಿ ನದಿ ಪಾತ್ರದ ಶಂಭೂರು ಡ್ಯಾಂನ ಹಿನ್ನೀರಿನ ಪ್ರದೇಶದಲ್ಲಿ ಹೂಳಿನೊಂದಿಗೆ ಮರಳನ್ನು ತೆಗೆಯಲು ಜಿಲ್ಲಾ ಮರಳು ಸಮಿತಿಯಿಂದ ಬೆಂಗಳೂರಿನ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ಗೆ ಕಾರ್ಯಾದೇಶ ನೀಡಲಾಗಿರುತ್ತದೆ.
ಪ್ರಸ್ತುತ ಈ ಎರಡು ಡ್ಯಾಂಗಳಲ್ಲಿ ಹೂಳಿನೊಂದಿಗೆ ದೊರಕುವ ಮರಳನ್ನು ತೆಗೆದು ಸ್ಟಾಕ್ಯಾರ್ಡ್ನಲ್ಲಿ ಶೇಖರಣೆ ಮಾಡಿ ಅಲ್ಲಿಂದ ಮರಳನ್ನು ಸಾರ್ವಜನಿಕರಿಗೆ, ಗ್ರಾಹಕರಿಗೆ, ಕಾಮಗಾರಿಗಳಿಗೆ ಕೆಎಸ್ಎಮ್ಸಿಎಲ್ ವತಿಯಿಂದ ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ ವಿತರಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.