ಫೆ.23 ರಂದುವಿದ್ಯುತ್ ವ್ಯತ್ಯಯ

 ಫೆ.23 ರಂದುವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಫೆ.22, 2022: 110/33/11 ಕೆವಿ ಕೊಣಾಜೆ ಉಪಕೇಂದ್ರದಿಂದ ಹೊರಡುವ 11ಕೆವಿ ಪಜೀರ್ ಮತ್ತು ಬೋಳಿಯಾರ್ ಫೀಡರ್‍ಗಳಲ್ಲಿ ಹಾಗೂ 33/11ಕೆವಿ ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11ಕೆವಿ ಕುತ್ತಾರ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳು ನಡೆಯಲಿದೆ.

ಆದ ಕಾರಣ ಫೆ.23ರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ  ಪನೀರ್, ದೇರಳಕಟ್ಟೆ, ಗ್ರಾಮಚಾವಡಿ, ಹರೇಕಳ, ಕಡಪು, ಬೈತಾರ್, ಕುತ್ತಿಮುಗೇರು, ದೆಬ್ಬೇಲಿ, ಪಾವೂರು, ಇನೋಳಿ, ಧರ್ಮನಗರ, ಗಾಡಿಗದ್ದೆ, ರಂತಡ್ಕ, ಪಲ್ಲಸೈಟ್, ಜಾರದಗುಡ್ಡೆ, ಕುತ್ತಾರು, ಮುನ್ನೂರು, ಮದನಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.
 
 ಬಿಜೈ:
110/33/11 ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆವಿ ಬಿಜೈ ಫೇಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ನಡೆಯಲಿದೆ.

ಆದ ಪ್ರಯುಕ್ತ ಫೆ. 23ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬಿಜೈ ಮೈನ್ ರೋಡ್, ಚರ್ಚ್ ರೋಡ್, ಬಿಜೈ ನ್ಯೂ ರೋಡ್, ಆನೆಗುಂಡಿ, ಎಂ.ಸಿ.ಎಫ್ ಕಾಲೋನಿ, ಸಂಕೈಗುಡ್ಡ, ಗ್ಯಾಸ್ ಗೋಡೌನ್, ಬಟ್ಟಗುಡ್ಡ, ನೋಡುಲೇನ್, ರಾಮಕೃಷ್ಣ ಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!