ಫೆ 10 ರಂದು ವಿದ್ಯುತ್ ವ್ಯತ್ಯಯ

 ಫೆ 10 ರಂದು ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಫೆ.9, 2022: ನಗರದ 33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್ ಸ್ಟ್ರೀಟ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ನಡೆಯಲಿದೆ.

ಈ ಪ್ರಯುಕ್ತ ಫೆ 10ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ  ನ್ಯೂಫೀಲ್ ಸ್ಟ್ರೀಟ್, ಕಾರ್ ಸ್ಟ್ರೀಟ್, ಶ್ರೀ ದಯಾನಂದ ಪೈ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಪುತ್ತು ಪ್ರಭುಲೇನ್, ಕಾರ್ಪೋರೇಶನ್ ಬ್ಯಾಂಕ್, ಗಾಯತ್ರಿ ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನಂದಿಗುಡ್ಡ:
ನಗರದ 33/11 ಕೆವಿ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆವಿ ಮಂಗಳಾದೇವಿ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ನಡೆಯಲಿದೆ.

ಆ ಹಿನ್ನಲೆಯಲ್ಲಿ ಇದೇ ಫೆ 10 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಂಗಳಾದೇವಿ, ಎಮ್ಮೆಕೆರೆ, ಹೊಯಿಗೆಬಜಾರ್, ಸುಭಾಶ್‍ನಗರ, ಶಿವನಗರ, ಮಂಕೀಸ್ಟ್ಯಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!